ಉಡುಪಿ- ಚಿಕ್ಕಮಗಳೂರು ಜಯಪ್ರಕಾಶ್ ಹೆಗ್ಡೆ, ದಕ – ಆರ್.ಪದ್ಮರಾಜ್ಗೆ ಟಿಕೆಟ್ ಫೈನಲ್?
ನವದೆಹಲಿ: ಕಾಂಗ್ರೆಸ್ ಪಕ್ಷವು ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಾಕಿಯಿದ್ದ 21 ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡು ಉಳಿದ ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಇಂದು ಕಾಂಗ್ರೆಸ್ ಹೈಕಮಾಂಡ್ ಬಾಕಿ ಇದ್ದ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ, ಘೋಷಣೆ ಮಾಡಿದೆ.
ದಕ್ಷಿಣ ಕನ್ನಡ- ಆರ್. ಪದ್ಮರಾಜ್, ಉಡುಪಿ-ಚಿಕ್ಕಮಗಳೂರು- ಕೆ. ಜಯಪ್ರಕಾಶ್ ಹೆಗ್ಡೆ, ಬೆಂಗಳೂರು ದಕ್ಷಿಣ- ಸೌಮ್ಯ ರೆಡ್ಡಿ, ಚಿತ್ರದುರ್ಗ- ಚಂದ್ರಪ್ಪ, ಬೆಳಗಾವಿ- ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿ- ಪ್ರಿಯಾಂಕ ಜಾರಕಿಹೊಳಿ, ಕೊಪ್ಪಳ- ರಾಜಶೇಖರ್ ಹಿಟ್ನಾಳ್.
ಬೀದರ್- ರಾಜಶೇಖರ್ ಪಾಟೀಲ್, ಬೆಂಗಳೂರು ಕೇಂದ್ರ- ಮನ್ಸೂರ್ ಅಲಿ ಖಾನ್, ರಾಯಚೂರು- ಕುಮಾರ್ ನಾಯಕ್, ಮೈಸೂರು- ಎಂ. ಲಕ್ಷಣ್, ಬೆಂಗಳೂರು ಉತ್ತರ- ಪ್ರೊ. ರಾಜೀವ್ ಗೌಡ್, ಬಾಗಲಕೋಟೆ- ಸಂಯುಕ್ತಾ ಶಿವನಾಂದ ಪಾಟೀಲ್, ಕಲಬುರಗಿ- ರಾಧಾಕೃಷ್ಣ ದೊಡ್ಡಮನಿ, ಧಾರವಾಡ- ವಿನೋದ್ ಅಸೂಟಿ, ಉತ್ತರ ಕನ್ನಡ- ಅಂಜನಿ ನಿಂಬಾಲ್ಕರ್ ಅವರನ್ನು ನೇಮಕಗೊಳಿಸಲಾಗಿದೆ.
ಕಾಂಗ್ರೆಸ್ ಈಗಾಗಲೇ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ದಾವಣಗೆರೆ ಹಾಗೂ ಚಾಮರಾಜನಗರ ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದ್ದು, ಎರಡು ದಿನಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ ಎಂದು ತಿಳಿದುಬಂದಿದೆ.