ಬೈಂದೂರು: ಸೂಕ್ತ ಸಮಯಕ್ಕೆ ಸಿಗದ ಚಿಕಿತ್ಸೆ, ಎರಡು ತಿಂಗಳ ಹಸುಳೆ ಮೃತ್ಯು
ಶಂಕರನಾರಾಯಣ: ತೀವೃ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಎರಡು ತಿಂಗಳ ಶಿಶುಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಮೃತ ಪಟ್ಟ ಘಟನೆ ನಡೆದಿದೆ.
ಬೈಂದೂರಿನ ಕಳವಾಡಿಯ ರಾಘವೇಂದ್ರ ಆಚಾರಿ ಇವರ 2 ತಿಂಗಳ ರಿಧಿ ಹೆಣ್ಣು ಮಗು ಇಂದು ಬೆಳಗ್ಗಿನ ಜಾವ 1.30 ಗಂಟೆಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿದ್ದು ಆ ಕೂಡಲೇ ತಂದೆ ವಾಹನದಲ್ಲಿ ಮಗಳನ್ನು ಚಿಕಿತ್ಸೆಗಾಗಿ ಕುಂದಾಪುರ ವಿನಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
ಆದರೆ ಅಲ್ಲಿ ತಡರಾತ್ರಿ ವೈದ್ಯರು ಲಭ್ಯರಿಲ್ಲದ ಕಾರಣ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಆಸ್ಪತ್ರೆ ತಲುಪುವಾಗ ಬೆಳಿಗ್ಗಿನ ಜಾವ 3 ಗಂಟೆಗೆ ಆಗಿತ್ತು. ಅಲ್ಲಿನ ವೈದ್ಯರು ರಿಧಿಯವರನ್ನು ಪರೀಕ್ಷಿಸಿದಾಗ ಆದಾಗಲೇ ಮಗು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ತಂದೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.