ಬ್ರಹ್ಮಾವರ: ಯೂಟ್ಯೂಬ್ ಚಾನಲ್ ಪ್ರಮೋಟ್ ಹೆಸರಿನಲ್ಲಿ 2.30 ಲಕ್ಷ ರೂ. ವಂಚನೆ
ಬ್ರಹ್ಮಾವರ, ಮಾ.17: ಯೂಟ್ಯೂಬ್ ಚಾನಲ್ ಪ್ರಮೋಟ್ ಮಾಡುವ ಬಗ್ಗೆ ಟಾಸ್ಕ್ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.12ರಂದು ಅಪರಿಚಿತರು ವಾಟ್ಸಪ್ ಯೂಟ್ಯೂಬ್ ಚಾನೆಲ್ನ್ನು ಪ್ರಮೋಟ್ ಮಾಡುವ ಬಗ್ಗೆ ಹೇರೂರು ಗ್ರಾಮದ ಸುಜಯ್ ಕುಮಾರ್ ಎಂಬವರಿಗೆ ಸಂದೇಶ ಕಳುಹಿಸಿ, ನಂತರ ಟೆಲಿಗ್ರಾಮ್ ಮೂಲಕ ಯೂ ಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿರುವ ಸ್ಕ್ರಿನ್ ಶಾಟ್ ಕಳುಹಿಸುವಂತೆ ತಿಳಿಸಿದ್ದರು. ಹೀಗೆ ಸುಜಯ್ ಕುಮಾರ್ ಅವರನ್ನು ಅಪರಿಚಿತರು ಯೂ ಟ್ಯೂಬ್ ಚಾನಲ್ ಪ್ರಮೋಟ್ ಮಾಡುವ ಬಗ್ಗೆ ಟಾಸ್ಕ್ ನೀಡುವುದಾಗಿ ನಂಬಿಸಿ 2,30,000ರೂ. ಹಣವನ್ನು ಮೋಸ ಮಾಡಿರುವುದಾಗಿ ದೂರು ನೀಡಲಾಗಿದೆ.