ಬೈಂದೂರು: ತಲೆ ಇಲ್ಲದ ಮೃತದೇಹವಿದೆ ಎಂದು ಸುಳ್ಳು ಮಾಹಿತಿ ನೀಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು
ಬೈಂದೂರು : ತಲೆ ಇಲ್ಲದ ಮೃತದೇಹ ಬಿದ್ದಿದೆ ಎಂಬುದಾಗಿ ಸುಳ್ಳು ಮಾಹಿತಿ ನೀಡಿ ಜನರಲ್ಲಿ ಭೀತಿ ಮೂಡಿಸಿದ ಆರೋಪದಲ್ಲಿ ಓರ್ವ ವ್ಯಕ್ತಿಯ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ ಜಿಲ್ಲಾಯ ಪಕೀರಪ್ಪ ಯಲ್ಲಪ್ಪ(30) ಎಂಬಾತ ಮಾ.14ರಂದು ಠಾಣೆಗೆ ತೆರಳಿ ಯಡ್ತರೆ ಗ್ರಾಮದ ಮದ್ದೋಡಿ ಗೇರು ಹಾಡಿ ಯಲ್ಲಿ ತಲೆ ಇಲ್ಲದ ಮನುಷ್ಯನ ದೇಹ ಬಿದ್ದಿದೆ ಎಂದು ಮಾಹಿತಿ ನೀಡಿದನು. ಅದರಂತೆ ಪೊಲೀಸರು ರಾತ್ರಿ ಹಗಲು ಎಲ್ಲ ಕಡೆಗಳಲ್ಲಿ ಹುಡುಕಾಡಿದರೂ ಎಲ್ಲೂ ಮೃತದೇಹ ಪತ್ತೆಯಾಗಿರಲಿಲ್ಲ.
ತಲೆ ಇಲ್ಲದ ಮನುಷ್ಯನ ಮೃತದೇಹ ಇಲ್ಲದಿದ್ದರೂ ಮೃತದೇಹ ಇರುವುದಾಗಿ ಸುಳ್ಳು ಮಾಹಿತಿ ನೀಡಿ ಹುಡುಕುವಂತೆ ಮಾಡಿರುವ ಹಾಗೂ ಆ ಮೂಲಕ ಪರಿಸರದ ಸಾರ್ವಜನಿಕರು ಗಲಿಬಿಲಿ ಆಗುವಂತೆ ಮಾಡಿದ ಪಕೀರಪ್ಪ ಯಲ್ಲಪ್ಪ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ