ಶ್ರೀವಡಭಾಂಡ ಬಲರಾಮ ದೇವಳ ಬ್ರಹ್ಮಕಲಶ: ಮುಜರಾಯಿ ಸಚಿವರಿಗೆ ಆಮಂತ್ರಣ
ಉಡುಪಿ: ಮುಜರಾಯಿ ಸಚಿವ ರಾಮಲಿಂಗ ರೆಡ್ಡಿಯವರನ್ನು ಶ್ರೀವಡಭಾಂಡ ಬಲರಾಮ ದೇವಳದ ವತಿಯಿಂದ ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿ, ಮನವಿ ಸಲ್ಲಿಸಲಾಯಿತು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಧನಾತ್ಮಕ ಬೆಂಬಲದ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ಶ್ರೀಶ ಭಟ್ ಕಡೆಕಾರ್, ಶೀರೂರು ಮಠದ ದಿವಾನ ಉದಯ ಸರಳತ್ತಾಯ, ಉದ್ಯಮಿ ರಾಮಚಂದ್ರ ಉಪಾಧ್ಯ, ಶ್ರೀನಿವಾಸ ಆಚಾರ್ಯ ಉಪಸ್ಥಿತರಿದ್ದರು.