ಸ್ವಚ್ಛತೆಯ ಬಗ್ಗೆ ಜಾಗೃತಗೊಳ್ಳದಿದ್ದರೆ ಮುಂದಿದೆ ಆಪತ್ತು- ಹ.ರಾ.ವಿನಯಚಂದ್ರ ಸಾಸ್ತಾನ
ಕೋಟ: ಪರಿಸರದ ಬಗ್ಗೆ ಈಗಲೇ ಜಾಗೃತಿಗೊಳ್ಳದಿದ್ದರೆ ಮುಂದಿದೆ ಬಹುದೊಡ್ಡ ಆಪತ್ತು ಎದುರಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಪರಿಸರವಾದಿ ಸಮಾಜ ಸೇವಕ ಹ.ರಾ ವಿನಯಚಂದ್ರ ಸಾಸ್ತಾನ ನುಡಿದರು.
ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು ಸಂಸ್ಥಾಪಕ ಆನಂದ ಸಿ. ಕುಂದರ್ ಹುಟ್ಟು ಹಬ್ಬದ ಅಮೃತ ಮಹೋತ್ಸವದ ಅಂಗವಾಗಿ, ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ಬಳಗ ಸಾಸ್ತಾನ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೆಳೆಯರ ಬಳಗ ಕಾರ್ಕಡ, ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ, ಆಶ್ರೀತ್ ಶಿಕ್ಷಣ ಸಂಸ್ಥೆಗಳು ಕೋಟ, ಲ.ಸೋ.ಬ.ಸ.ಪ್ರ ಕಾಲೇಜು ಪಡುಕರೆ,ಕೋಟ, ಕೋಟತಟ್ಟು, ಕೋಡಿ ಗ್ರಾ.ಪಂ. ಸಾಲಿಗ್ರಾಮ ಪ.ಪಂ ಇವರುಗಳ ಸಹಯೋಗದೊಂ ದಿಗೆ ಪ್ರತಿ ಭಾನುವಾರದ ಪರಿಸರಸ್ನೇಹಿ ಅಭಿಯಾನದ ಭಾಗವಾಗಿ 200 ವಾರಗಳ ಪರಿಸರ ಜಾಗೃತಿ ಸ್ವಚ್ಛತಾ ಅಭಿಯಾನ ಕೋಡಿ ಗ್ರಾ.ಪಂ ನಿಂದ ಕೋಟ ಗ್ರಾ.ಪಂ ವರೆಗಿನ ಬೀಚ್ ರಸ್ತೆ ತ್ಯಾಜ್ಯ ಮುಕ್ತವಾಗಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಪರಿಸರದ ಬಗ್ಗೆ ನಿರ್ಲಕ್ಷ್ಯ ಮಾಡದಿರಿ ಇಂದು ಈ ನಿರ್ಲಕ್ಷ್ಯ ಮುಂದಿನ ಪೀಳಿಗೆಗೆ ಕ್ಲಿಷ್ಟಕರ ಸಮಸ್ಯೆಯಾಗಿ ಪರಿಣಮಿಸಲಿದೆ. ಪ್ರತಿ ಮನೆಮನೆಗಳಲ್ಲಿ ವಿವಿಧ ಉದ್ಯಮಗಳಲ್ಲಿ ಪ್ಲಾಸ್ಟಿಕ್ ಅತಿ ಹೆಚ್ಚು ಬಳಕೆ ಕಾಣುತ್ತಿದೆ ಈಮೂಲಕವೇ ಕ್ಯಾನ್ಸರ್ ನಂತಹ ಮಹಾ ಖಾಯಿಲೆಗಳು ಮನುಷ್ಯನ ಜೀವಕ್ಕೆ ಸಂಚಕಾರ ತಂದಿಡುತ್ತಿದೆ. ತಾಪಮಾನ ಹೆಚ್ಚಾಗುತ್ತಿದೆ.ಮರಗಳ ಸಂಖ್ಯೆ ದಿನದಿಂದ ದಿನಕ್ಕೆ ಅಳಿವಿನಂಚಿಗೆ ತಲುಪುತ್ತಿದೆ.ಇದರಿಂದ ಜಾಗೃತ ಗುಳ್ಳ ಬೇಕಿದ್ದರೆ ಪರಿಸರವನ್ನು ಸಂರಕ್ಷಿಸುವ ಕಾರ್ಯ ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಸಮಾಜಸೇವಕ ಗೀತಾನಂದ ಟ್ರಸ್ಟ್ ಮುಖ್ಯಸ್ಥ ಆನಂದ್ ಸಿ ಕುಂದರ್ ಉದ್ಘಾಟಿಸಿ ಪ್ಲಾಸ್ಟಿಕ್ ಮುಕ್ತ ಸಮಾಜದ ಪರಿಕಲ್ಪನೆ ಬರೇ ಸಂಘಟನೆಗಳಿಗೆ ಸಿಮೀತಗೊಳ್ಳಬಾರದು, ಅದು ಪ್ರತಿಯೊಬ್ಬರಲ್ಲೂ ಕಾಣಬೇಕು,ಪರಿಸರ ಸಂರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲದರು ಆಗಬೇಕು ಪಂಚವರ್ಣ ದವರ ನಿತ್ಯ ನಿರಂತರ ಪರಿಸರ ಕಾಳಜಿ ಅತ್ಯಂತ ಪ್ರಶಂಸನೀಯ ಕಾರ್ಯವಾಗಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.
ಇದೇ ವೇಳೆ 75ರ ಇಳಿ ವಯಸ್ಸಿನ ಸ್ವಚ್ಛಬ್ರಿಗೇಡ್ ಕಾರ್ಕಳದ ಫೆಲಿಕ್ಸ್ ವಾಜ್ ಇವರನ್ನು ಗುರುತಿಸಿ ಗೌರವಿಸಲಾಯಿತು.200ನೇ ಅಭಿಯಾನಕ್ಕಾಗಿ ಸ್ವಚ್ಛ ಬ್ರಿಗೇಡ್ ಕಾರ್ಕಳದ ವತಿಯಿಂದ ಪಂಚವರ್ಣ ಸಂಸ್ಥೆಯನ್ನು ಅಭಿನಂದಿಸಿತು. ಮುಖ್ಯ ಅಭ್ಯಾಗತರಾಗಿ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್, ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಕಾರ್ವಿ, ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ಸತೀಶ್ ಕುಂದರ್, ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ಜಗದೀಶ್ ನಾವಡ,ಆಶ್ರೀತ್ ಶಿಕ್ಷಣ ಸಂಸ್ಥೆ ಯ ಪ್ರಾಂಶುಪಾಲ ಮೋಹನ್ ,ಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ದೈಹಿಕ ಶಿಕ್ಷಕ ವಿಜಯ್ , ರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ದಿನೇಶ್ ಗಾಣಿಗ, ಸ್ವಚ್ಛ ಬ್ರಿಗೇಡ್ ಕಾರ್ಕಳದ ಸುನಿತಾ,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಸುಧಾಕರ್ ಪೂಜಾರಿ, ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ದೇವಪ್ಪ ಪಟಗಾರ್, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ವಿಪ್ರ ಮಹಿಳಾಬಳಗ ಸಾಲಿಗ್ರಾಮ ಸಂಚಾಲಕಿ ವನೀತಾ ಉಪಾಧ್ಯ,ಪಾಂಚಜನ್ಯ ಸಂಘ ಹಂದಟ್ಟು ಪಾರಂಪಳ್ಳಿ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ,ಜನತಾ ಸಂಸ್ಥೆ ವ್ಯವಸ್ಥಾಪಕ ಶ್ರೀನಿವಾಸ್ ಕುಂದರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಹಂದಟ್ಟು ಮಹಿಳಾ ಬಳಗದ ರತ್ನ ಪೂಜಾರಿ, ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಿವಮೂರ್ತಿ ಕೆ,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.
ಕೋಡಿ ಗ್ರಾಮಪಂಚಾಯತ್ ಪಿಡಿಒ ರವೀಂದ್ರ ರಾವ್ ಸ್ವಾಗತಿಸಿದರು.ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಪ್ರಾಸ್ತಾವನೆ ಸಲ್ಲಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.
ಇದೇ ಮೊದಲ ಬಾರಿ 5 ಕೀಲೋಮಿಟರ್ ಸ್ವಚ್ಛತೆ
ಇದೇ ಮೊದಲ ಬಾರಿ ಎಂಬಂತೆ ಬೃಹತ್ ಮಟ್ಟದ ಸ್ವಚ್ಛತಾ ಅಭಿಯಾನ ಸುಮಾರು 5ಕಿಮೀ ದೂರದ ಬೀಚ್ ರಸ್ತೆ ಪ್ಲಾಸ್ಟಿಕ್ ಮುಕ್ತಗೊಳಿಸುವ ಅಭಿಯಾನ ತಂಡೋಪ ತಂಡವಾಗಿ ವಿವಿಧ ಪಂಚಾಯತ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಸ್ತೆಯಲ್ಲಿ ಸಂಚರಿಸಿ ಸ್ವಚ್ಛಗೊಳಿಸಲಾಯಿತು.
ದಾರಿಯೂದ್ದಕ್ಕೂ ಪಾನಕ ವ್ಯವಸ್ಥೆ
ಕೋಡಿ ಗ್ರಾ.ಪಂ ನಿಂದ ಕೋಟ ಗ್ರಾ.ಪಂ ವರೆಗಿನ ಬೀಚ್ ರಸ್ತೆಯಲ್ಲಿ ಅಲ್ಲಿನ ಸ್ಥಳೀಯರು ಆಯಾ ವ್ಯಾಪ್ತಿಯ ಪ್ರಮುಖರಾದ ಕೋಡಿ ಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ,ಗೆಳೆಯರ ಬಳಗ ಕಾರ್ಕಡ, ಕೋಟತಟ್ಟು ಶಿವಮೂರ್ತಿ ಉಪಾಧ್ಯ ಮತ್ತವರ ತಂಡದಿಂದ ಪಾನಕ ವ್ಯವಸ್ಥೆ ಕಲ್ಪಿಸಿದರು. ಕೋಡಿ ಗ್ರಾಮ ಪಂಚಾಯತ್ ಉಪಹಾರದ ವ್ಯವಸ್ಥೆ, ಗೀತಾನಂದ ಫೌಂಡೇಶನ್, ಜನತಾ ಸಂಸ್ಥೆ ಚೀಲ ಹಾಗೂ ವಾಹನದ ವ್ಯವಸ್ಥೆ ಕಲ್ಪಿಸಿತು.
ಜಾಗೃತಿ ಅಭಿಯಾನದಲ್ಲಿ ವಿದ್ಯಾರ್ಥಿಸಮೂಹ: ಈ ಕಾರ್ಯಕ್ರಮದಲ್ಲಿ ಆಶ್ರೀತ್ ಶಿಕ್ಷಣ ಸಂಸ್ಥೆಯಿಂದ, ಕೋಟದ ಲ.ಸೋ.ಬ.ಸ.ಪ್ರ.ಕಾಲೇಜು ಪಡುಕರೆ, ಕೋಡಿ ಪ್ರಾಥಮಿಕ ಶಾಲೆ, ಸೋಮಬಂಗೇರ ಪಿಯು ಕಾಲೇಜು,ಕೋಟ ವಿವೇಕ ವಿದ್ಯಾಸಂಸ್ಥೆ,ಕ್ಲಿನ್ ಕುಂದಾಪುರ, ಪಾಂಚಜನ್ಯ ಸಂಘ ಹಂದಟ್ಟು ಪಾರಂಪಳ್ಳಿ, ಕ್ಲಿನ್ ತ್ರಾಸಿ ಮರವಂತೆ,ವಕ್ವಾಡಿ ಫ್ರೆಂಡ್ಸ್,ವಿನ್ ಲೈಟ್ ಸ್ಪೋಟ್ಸ್9 ಕ್ಲಬ್ ಪಾರಂಪಳ್ಳಿ, ಸ್ವಚ್ಛ ಬ್ರಿಗೇಡ್ ಕಾರ್ಕಳ,ಟೀಮ್ ಭವಾಬ್ಧಿ ಪಡುಕರೆ ಇನ್ನು ಅನೇಕ ಸಂಘಸಂಸ್ಥೆಗಳು ಸಹಕಾರ ನೀಡಿ ಭಾಗಿಯಾದವು.
ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ಮಣೂರು ಫ್ರೆಂಡ್ಸ್ ,ಹಂದಟ್ಟು ಮಹಿಳಾ ಬಳಗ ಕೋಟ,ವಿಪ್ರ ಮಹಿಳಾ ಬಳಗ ಸಾಸ್ತಾನ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೆಳೆಯರ ಬಳಗ ಕಾರ್ಕಡ,ವಿನ್ ಲೈಟ್ ಸ್ಪೋರ್ಟ್್ಸ ಕ್ಲಬ್ ಪಾರಂಪಳ್ಳಿ,ಆಶ್ರೀತ್ ಶಿಕ್ಷಣ ಸಂಸ್ಥೆಗಳು ಕೋಟ, ಲ.ಸೋ.ಬ.ಸ.ಪ್ರ ಕಾಲೇಜು ಪಡುಕರೆ,ಕೋಟ ,ಕೋಟತಟ್ಟು, ಕೋಡಿ ಗ್ರಾ.ಪಂ. ಸಾಲಿಗ್ರಾಮ ಪ.ಪಂ ಇವರುಗಳ ಸಹಯೋಗದೊಂ ದಿಗೆ ಪ್ರತಿ ಭಾನುವಾರದ ಪರಿಸರಸ್ನೇಹಿ ಅಭಿಯಾನದ ಭಾಗವಾಗಿ 200 ವಾರಗಳ ಪರಿಸರ ಜಾಗೃತಿ ಸ್ವಚ್ಛತಾ ಅಭಿಯಾನದಲ್ಲಿ ಸ್ವಚ್ಛಬ್ರಿಗೇಡ್ ಕಾರ್ಕಳದ ಫೆಲಿಕ್ಸ್ ವಾಜ್ ಇವರನ್ನು ಗುರುತಿಸಿ ಗೌರವಿಸಲಾಯಿತು. ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್, ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಕಾರ್ವಿ, ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ಸತೀಶ್ ಕುಂದರ್ ಮತ್ತಿತರರು ಇದ್ದರು.