ನಿರಂತರ್ ಉದ್ಯಾವರ : ಮಾ.16-17 ಕೊಂಕಣಿ ನಾಟಕ ಮತ್ತು ಕತ್ತಲ ಹಾಡು ಕಾರ್ಯಕ್ರಮ
ಉದ್ಯಾವರ : ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆ ನಿರಂತರ್ ಉದ್ಯಾವರದ ನೇತೃತ್ವದಲ್ಲಿ ಎರಡು ದಿನದ ಸಾಂಸ್ಕೃತಿಕ ಕಾರ್ಯಕ್ರಮವು ಮಾರ್ಚ್ 16 ಮತ್ತು 17ರಂದು ಉದ್ಯಾವರದ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ವಠಾರದಲ್ಲಿ ಸಂಜೆ ಗಂಟೆ 6:30ಕ್ಕೆ ಸರಿಯಾಗಿ ನಡೆಯಲಿದೆ.
ಮಾರ್ಚ್ 16ರಂದು ಮಂಗಳೂರಿನ ಅಸ್ತಿತ್ವ ಇವರಿಂದ ವo.ಫಾ. ಆಲ್ವಿನ್ ಸೆರಾವೊ ಬರೆದಂತಹ ಕೊಂಕಣಿ ನಾಟಕ ‘ಹಿಮ್ಟೊ’ ಮತ್ತು ಮಾರ್ಚ್ 17 ಆದಿತ್ಯವಾರ ಪ್ರಖ್ಯಾತ ನಾದ ಮಣಿನಾಲ್ಕೂರು ಇವರಿಂದ ‘ಕತ್ತಲ ಹಾಡು’ ಕಾರ್ಯಕ್ರಮ ಜರುಗಲಿದೆ ಎಂದು ಸಂಘಟನೆಯ ಅಧ್ಯಕ್ಷ ರೋಶನ್ ಕ್ರಾಸ್ಟೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಸಂಪರ್ಕ ಸಾಧನ ಆಯೋಗ, ಐಸಿವೈಎಂ ಉದ್ಯಾವರ, ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ಮತ್ತು ಸೌಹಾರ್ದ ಸಮಿತಿ ಉದ್ಯಾವರ ಸಹಭಾಗಿತ್ವದಲ್ಲಿ ನಡೆಯುವ ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಕರ್ನಾಟಕ ರಾಜ್ಯದ ಪ್ರಥಮ ಲಿಂಗತ್ವ ಅಲ್ಪಸಂಖ್ಯಾತ ರಿಕ್ಷಾ ಚಾಲಕಿ ಕಾವೇರಿ ಮೇರಿ ಡಿಸೋಜ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.