ಕುಂದಾಪುರ: ವಿದ್ಯುತ್ ಶಾಕ್ ತಗುಲಿ ಹತ್ತನೇ ತರಗತಿ ವಿದ್ಯಾರ್ಥಿ ಮೃತ್ಯು
ಕುಂದಾಪುರ : ನವರಾತ್ರಿ ಉತ್ಸವಕ್ಕೆ ಹಾಕಿದ ವಿದ್ಯುತ್ ದೀಪದ ಕೇಬಲ್ ವಯರ್‌ನಿಂದ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಹತ್ತನೇ ತರಗತಿ ವಿದ್ಯಾರ್ಥಿಯೊರ್ವ ಮೃತ ಪಟ್ಟ ಘಟನೆ ನಡೆದಿದೆ.
ಉಪ್ಪಿನಕುದ್ರು ಗಂಗಾಧರ ಆಚಾರ್ಯರ ಮಗ ಧನುಷ್ (16) ಶನಿವಾರ ರಾತ್ರಿ 9.30 ಗಂಟೆಗೆ ಶ್ರೀ ಲಲಿತಾ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನವರಾತ್ರಿ ಉತ್ಸವದ ಕಾರ್ಯಕ್ರಮಕ್ಕೆ ಹೋಗಿದ್ದ. ಈ ಸಂದರ್ಭ ಧನುಷ್‌ಗೆ ದೇವಸ್ಥಾನದ ಕಂಪೌಂಡ್ ಗೋಡೆಗೆ ಅಳವಡಿಸಿದ ಅಲಂಕಾರಕ್ಕಾಗಿ ಅಳವಡಿಸಿದ ವಿದ್ಯುತ್ ಕೇಬಲ್ ಆಕಸ್ಮಿಕವಾಗಿ ತಗಲಿತ್ತು.
ಇದರಿಂದ ತೀವೃ ಅಸ್ವಸ್ಥಗೊಂಡ ಬಾಲಕನನ್ನು ಕೂಡಲೇ ಕುಂದಾಪುರದ ವಿನಯ ಆಸ್ಪತ್ರೆಗೆ ದಾಖಲಾಗಿಸಿತ್ತು. ನಂತರ ಪರೀಕ್ಷಿಸಿದ ವೈದ್ಯರು ಬಾಲಕ ಆದಾಗಲೇ ವಿದ್ಯುತ್ ಶಾಕ್ ನಿಂದ ಮೃತಪಟ್ಟಿರುತ್ತಾನೆಂದು ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.