‘ಹತ್ತು ವರ್ಷಗಳ ಕೆಲಸ ಕೇವಲ ಟ್ರೇಲರ್’: ಪ್ರಧಾನಿ ಮೋದಿ
ಅಹಮದಾಬಾದ್, ಮಾ 12: ಮಂಗಳೂರು- ತಿರುವನಂತಪುರ ವಿಸ್ತರಣೆ ರೈಲು, ಬೆಂಗಳೂರು- ಚೆನ್ನೈ, ಬೆಂಗಳೂರು- ಕಲಬುರ್ಗಿ ಸೇರಿದಂತೆ ಹೊಸ ರೈಲು ಸಂಚಾರಕ್ಕೆ ಇಂದು ಪ್ರಧಾನಿ ಮೋದಿ ಅವರು ಅಹಮದಾಬಾದ್ ನಲ್ಲಿ ಚಾಲನೆ ನೀಡಿದ್ದಾರೆ.
ಸುಮಾರು 85 ಸಾವಿರ. ಕೋಟಿ ರೂ. ವೆಚ್ಚದ ಹಲವಾರು ರೈಲ್ವೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, “ಅಭಿವೃದ್ದಿ ಹೊಂದಿದ ಮತ್ತು ಆರ್ಥಿಕ ಶಕ್ತಿಯಾಗಿರುವ ದೇಶಗಳಲ್ಲಿ ರೈಲ್ವೆ ಪ್ರಮುಖ ಪಾತ್ರವಹಿಸಿದೆ ಎಂಬುವುದನ್ನು ನಾವು ಎಲ್ಲಿ ಬೇಕಾದರೂ ನೋಡ ಬಹುದು. ಹೀಗಾಗಿ ರೈಲಿಗೆ ಕಾಯಕಲ್ಪ ನೀಡುವುದು ಕೂಡಾ ವಿಕಸಿತ ಭಾರತದ ಗ್ಯಾರಂಟಿಯಾಗಿದೆ” ಎಂದಿದ್ದಾರೆ.
“ಈಗ ರೈಲ್ವೇ ಅಭಿವೃದ್ಧಿಯು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ.ಈ 10ವರ್ಷಗಳ ಕೆಲಸವು ಕೇವಲ ಟ್ರೇಲರ್ ಆಗಿದೆ. ನಾವು ಬಹಳ ದೂರ ಸಾಗಬೇಕಾಗಿದೆ.ನಮ್ಮ ಮುಂದಿನ ಪೀಳಿಗೆಗಳು ನಾವು ಎದುರಿಸುತ್ತಿರುವ ಹೋರಾಟಗಳನ್ನು ಎದುರಿಸಬಾರದು. ವಂದೇ ಭಾರತ್ ರೈಲಿನ ನೆಟ್ವರ್ಕ್ 250 ಜಿಲ್ಲೆಗಳನ್ನು ತಲುಪಿದೆ.ಸರ್ಕಾರವು ವಂದೇ ಭಾರತ್ ರೈಲುಗಳ ಮಾರ್ಗವನ್ನು ಸತತವಾಗಿ ವಿಸ್ತರಿಸುತ್ತಿದೆ. ನಾವು ರೈಲ್ವೆಯ 100% ವಿದ್ಯುದ್ದೀಕರಣದ ಕಡೆಗೆ ಕೆಲಸ ಮಾಡುತ್ತಿದ್ದೇವೆ. ರೈಲು ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದೇವೆ.