ಉಡುಪಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್: ಮಹಿಳಾ ದಿನಾಚರಣೆ
ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಉಡುಪಿ ವಲಯದ ವತಿಯಿಂದ ಬ್ರಹ್ಮಗಿರಿಯ ಸುರಭಿ ಸ್ಟುಡಿಯೋದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕಲರ್ ಲ್ಯಾಬ್ ಗಳಲ್ಲಿ ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹಿರಿಯ ಮಹಿಳಾ ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಫೋಟೋ ಪ್ಯಾಲೇಸ್ ಕಲರ್ ಲ್ಯಾಬ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಭ ಪೂಜಾರಿ ಹಾಗೂ ವರ್ಣ ಕಲರ್ ಲ್ಯಾಬ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮೀ ಶೆಟ್ಟಿ ಇವರನ್ನ ಸಂಘದ ಅಧ್ಯಕ್ಷ ಸುಧೀರ್ ಎಂ ಶೆಟ್ಟಿಯವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ದಿವಾಕರ್ ಹಿರಿಯಡ್ಕ, ಕೋಶಾಧಿಕಾರಿ ರಮೇಶ್ ಭಟ್ ಎಲ್ಲೂರು, ದೇವದಾಸ್ ಕಾಮತ್, ಸುರಭಿ ರತನ್, ಮುಖೇಶ್ ಅಮೀನ್, ಪ್ರಕಾಶ್ ಆಲ್ಫೋನ್ಸ್ ಉಪಸ್ಥಿತರಿದ್ದರು.