ಮಗಳ ಮದುವೆಗೆ ಊರಿಗೆ ಬರುವ ಸಿದ್ದತೆಯಲ್ಲಿದ್ದ ಕೋಟದ ವ್ಯಕ್ತಿ ಕುವೈಟ್ನಲ್ಲಿ ಮೃತ್ಯು
ಕೋಟ ಮಾ.11(ಉಡುಪಿ ಟೈಮ್ಸ್ ವರದಿ): ಇಲ್ಲಿನ ಕೋಡಿ ಕನ್ಯಾಣ ಗ್ರಾಮದ ದಿ| ಜಿ.ಕೆ. ಹಸನಬ್ಬ ಅವರ ಪುತ್ರ ಜಲಾಲ್ (55) ಮಾ. 9ರಂದು ಸಂಜೆ ಕುವೈಟ್ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹಲವು ವರ್ಷಗಳಿಂದ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅವರು, ಮಗಳ ಮದುವೆಗಾಗಿ ಇನ್ನು ಹತ್ತು ದಿನದಲ್ಲಿ ಊರಿಗೆ ಬರುವ ತಯಾರಿಯಲ್ಲಿದ್ದರು. ಆದರೆ ಈ ನಡುವೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ವಿಷಯ ತಿಳಿದ ಮನೆಯವರ ರೋಧನ ಮುಗಿಲು ಮುಟ್ಟಿದೆ. ಸೋಮವಾರ ಮೃತದೇಹ ತಾಯ್ನಾಡಿಗೆ ತಲುಪಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.