ಕಕ್ಕುಂಜೆ “ಸುಮಂತ್ ಟ್ರೋಫಿ-2024” ಕ್ರಿಕೆಟ್ ಪಂದ್ಯಾಟ ಉದ್ಘಾಟನೆ
ಉಡುಪಿ ಮಾ.10(ಉಡುಪಿ ಟೈಮ್ಸ್ ವರದಿ): ಕಕ್ಕುಂಜೆ ಶಾಲಾ ಮೈದಾನದಲ್ಲಿ ನಡೆದ ಸುಮಂತ್ ಟ್ರೋಫಿ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಸುಧಾಕರ ಪಾಲನ್ ವೇದಿಕೆಯಲ್ಲಿ ನೆರವೇರಿತು.
ನಗರ ಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಮಾರಂಭದಲ್ಲಿ ಹೆಸರಾಂತ ಸಮಾಜ ಸೇವಕರಾದ ವಿಷು ಶೆಟ್ಟಿ ಅಂಬಲಪಾಡಿ, ಈಶ್ವರ ಮಲ್ಪೆ, ರವಿ ಕಟಪಾಡಿಯರವರನ್ನು ಸನ್ಮಾನಿಸಲಾಯಿತು.
ಈ ವೇಳೆ ಬಾಲಕೃಷ್ಣ ಬಯಲು ಮನೆ, ರಮೇಶ್, ಉಮೇಶ್ ಪೂಜಾರಿ, ನಗರಸಭಾ ಕರಂಬಳ್ಳಿ ವಾರ್ಡಿನ ಸದಸ್ಯರಾದ ಗಿರಿಧರ ಆಚಾರ್ಯ, ಸುಪ್ರಭಾ ಫ್ರೆಂಡ್ಸ್ ಅಧ್ಯಕ್ಷ ಕಿರಣ್ ಶೆಟ್ಟಿ, ನಮ್ಮ ಟಿವಿ ಛಾಯಾಗ್ರಹಕ. ಹರೀಶ್ ಮತ್ತು ಸುಶಾಂತ ನಾಯ್ಕ್ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಕಕ್ಕುಂಜೆ ಸ್ವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಕೆ. ಮಹೇಶ್ ಶೆಟ್ಟಿ, ನಗರಸಭಾ ಮಾಜಿ ಸದಸ್ಯೆ ಶೋಭಾ ಸುರೇಶ್, ಉದ್ಯಮಿ ಪ್ರಕಾಶ್ ಕಕ್ಕುಂಜೆ ದುಬೈ ಮತ್ತು ಯವಕ ಮಂಡಲದ ಅಧ್ಯಕ್ಷ ಪ್ರವೀಣ್ ದೇವಾಡಿಗ, ಉದ್ಯಮಿ ಉದಯ ಸುವರ್ಣ, ಸ್ವರ್ಣ ಯುವಕ ಮಂಡಲದ ಸಂಚಾಲಕ ವಾಸು ಎಸ್, ಉದ್ಯಮಿ ಮನೋಜ್ ತಾಂಗದ ಗಡಿ, ನಿರ್ಮಿತಿ ಕೇಂದ್ರದ ಪ್ರಶಾಂತ್, ಹಾಗೂ ದಿವಂಗತ ಸುಮಂತ್ ಮತ್ತು ದಿ. ಸುಧಾಕರ್ ರವರ ರಕ್ಷಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.