ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾಗಿ ಸಂತೋಷ್ ಕರ್ನೆಲಿಯೊ ಆಯ್ಕೆ
ಉಡುಪಿ: ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ 2024-25 ನೇ ಸಾಲಿನ ಅಧ್ಯಕ್ಷರಾಗಿ ಕಲ್ಯಾಣಪುರ ಸಂತೆಕಟ್ಟೆಯ ಸಂತೋಷ್ ಕರ್ನೆಲಿಯೋ ಹಾಗೂ ಕಾರ್ಯದರ್ಶಿಯಾಗಿ ಕಾರ್ಕಳ ಟೌನ್ ಚರ್ಚಿನ ಓಲಿವೀಯಾ ಡಿಮೆಲ್ಲೊ ಆಯ್ಕೆಯಾಗಿಯಾಗಿದ್ದಾರೆ.
ಭಾನುವಾರ ಅಂಬಾಗಿಲು ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ನಡೆದ ಪದಾಧಿಕಾರಿಗಳ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ನಿಕಟಪೂರ್ವ ಅಧ್ಯಕ್ಷರಾದ ಮೇರಿ ಡಿಸೋಜಾ ಉದ್ಯಾವರ ಉಪಸ್ಥಿತರಿದ್ದು, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು.
ಇತರ ಪದಾಧಿಕಾರಿಗಳು: ನಿಯೋಜಿತ ಅಧ್ಯಕ್ಷರು – ರೊನಾಲ್ಡ್ ಡಿ ಆಲ್ಮೇಡಾ ಉದ್ಯಾವರ, ಉಪಾಧ್ಯಕ್ಷರು – ಸೊಲೊಮನ್ ಅಲ್ವಾರಿಸ್ ಕಾರ್ಕಳ, ಸಹಕಾರ್ಯದರ್ಶಿ ಲೂವಿಸ್ ಡಿಸೋಜಾ ಸಾಸ್ತಾನ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್ ಶಿರ್ವ, ಸಹಕೋಶಾಧಿಕಾರಿ ಲೆಸ್ಲಿ ಕರ್ನೆಲಿಯೋ ಉಡುಪಿ, ಆಂತರಿಕ ಲೆಕ್ಕಪರಿಶೋಧಕರು ಶಾಂತಿ ಪಿರೇರಾ ಕುಂದಾಪುರ, ನಿಕಟಪೂರ್ವ ಅಧ್ಯಕ್ಷರು ಮೇರಿ ಡಿಸೋಜಾ ಉದ್ಯಾವರ.