ಇಂದ್ರಾಳಿ ಮಸೀದಿಯ ಮುಖ್ಯದ್ವಾರ, ವಿದ್ಯುತ್ ದೀಪ, ಆವರಣ ಗೋಡೆ ಉದ್ಘಾಟನೆ
ಉಡುಪಿ: ನೂರಾನಿ ಮಸೀದಿ ಇಂದ್ರಾಳಿ ಇದರ ನವೀಕೃತಗೊಂಡ ಆವರಣದ ವಿದ್ಯುತ್ ದೀಪಗಳನ್ನು ರಿಝವಾನ್ ರವರು ಶುಕ್ರವಾರ ದೀಪ ಬೆಳಗಿಸಿ ಉದ್ಘಾಟಿಸಿದರು.
ಮಸೀದಿಯ ಆವರಣದ ಮುಖ್ಯ ದ್ವಾರದ ಉದ್ಘಾಟನೆಯನ್ನು ಉದ್ಯಮಿ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಉಡುಪಿ ಶೇಕ್ ವಹೀದ್ ಉದ್ಘಾಟಿಸಿದರು. ನಂತರ ಮಸೀದಿಯ ಆವರಣದ ಎರಡನೇ ದ್ವಾರದ ಉದ್ಘಾಟನೆಯನ್ನು ಎಸ್.ಎಂ. ಜಾಫರ್ ಸಾಹೇಬ್ ಉದ್ಘಾಟಿಸಿದರು. ಮಸೀದಿಯ ಆವರಣದ 3ನೇ ದ್ವಾರದ ಉದ್ಘಾಟನೆಯನ್ನು ಅಬ್ದುಲ್ ಗಫೂರ್ ಪಣಿಯಾಡಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನೂರಾನಿ ಮಸೀದಿಯ ಇಮಾಮ್ ಮೌಲಾನ ಮಸಿವೂಲ್ಲಖಾನ್, ಮಸೀದಿಯ ಅಧ್ಯಕ್ಷರಾದ ಶಬ್ಬೀರ್ ಅಹ್ಮದ್ ಹಾಗೂ ಉಪಾಧ್ಯಕ್ಷ ಲಿಯಾಖತ್ ಆಲಿ, ಮಸೀದಿಯ ಕಮಿಟಿ ಸದಸ್ಯರು ಮತ್ತು ಜಮಾತ್ ಬಾಂಧವರು ಉಪಸ್ಥಿತರಿದ್ದರು. ಅಸ್ಲಂ ಖಾಜಿ ಕಾಪು ಇವರು ಮಸೀದಿಗೆ ಭೇಟಿ ನೀಡಿ ಸಂತೋಷ ವ್ಯಕ್ತಪಡಿಸಿದರು .ಈ ಸಂದರ್ಭದಲ್ಲಿ ನೂರಾರು ಸಮಾಜ ಭಾಂದವರು ಉಪಸ್ಥರಿದ್ದರು.