ಪಡುಬಿದ್ರೆ: ಕೆರೆಯಲ್ಲಿ ಮುಳುಗಿ ಯುವಕ ಸಂಶಯಾಸ್ಪದ ಸಾವು
ಪಡುಬಿದ್ರೆ, ಮಾ.8: ಕೆರೆಯ ನೀರಿನಲ್ಲಿ ಮುಳುಗಿ ಯುವಕನೋರ್ವ ಸಂಶಯಾಸ್ಪದವಾಗಿ ಮೃತಪಟ್ಟ ಘಟನೆ ಮಾ.7ರಂದು ಸಂಜೆ ಸಾಂತೂರು ಕೊಪ್ಲ ಪಡುಮನೆ ಎಂಬಲ್ಲಿ ನಡೆದಿದೆ.
ಮೃತರನ್ನು ಕಾರ್ಕಳ ಹಿರ್ಗಾನ ಗ್ರಾಮದ ಯೋಗೀಶ್ (29) ಎಂದು ಗುರುತಿಸಲಾಗಿದೆ. ಇವರು ಬೆಳಗ್ಗೆ ಮನೆಯಿಂದ ಸಾಂತೂರು ಕೊಪ್ಲ ಪಡುಮನೆ ಎಂಬಲ್ಲಿ ಮರದ ಕೆಲಸಕ್ಕೆಂದು ಹೋಗಿದ್ದರು. ಸಂಜೆ ಅಲ್ಲಿಯ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಹೇಳಲಾಗಿದೆ.
ಆದರೆ ಯೋಗೀಶ್ ಒಳ್ಳೆಯ ಈಜುಗಾರನಾಗಿದ್ದು, ಅವರ ಕೆರೆಯ ನೀರಿನಲ್ಲಿ ಮುಳುಗಿ ಸತ್ತಿರುವ ಬಗ್ಗೆ ಸಂಶಯವಿರುವುದಾಗಿ ಮೃತರ ಸಹೋದರ ವಿಘ್ನೇಶ್ ನೀಡಿದ ದೂರಿನಂತೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.