ಉಡುಪಿ: ಮಾಸ್ಕ್ ಅಳವಡಿಸದ ಸರ್ಕಾರಿ ಬಸ್ ಕಂಡಕ್ಟರ್‌ಗೆ ದಂಡ ವಿಧಿಸಿದ – ಜಿಲ್ಲಾಧಿಕಾರಿ

ಉಡುಪಿ, ಅ17: ಉಡುಪಿ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿ ಶನಿವಾರ ನಡೆದ
ಕೋವಿಡ್ ಜನಾಂದೋಲನ ಮಾಹಿತಿ ಕಾರ್ಯಕ್ರಮದ ನಂತರ, ಸಮೀಪದ ವಸತಿ ಸಂಕೀರ್ಣದ ಮನೆಗೆ “ನನ್ನ ಕುಟುಂಬ ನನ್ ಜವಾಬ್ದಾರಿ” ಅಭಿಯಾನ ಕಾರ್ಯಕ್ರಮದ ಸ್ಟಿಕರ್ ಅಳವಡಿಸಿ ಹೊರ ಬಂದ ಜಿಲ್ಲಾಧಿಕಾರಿ ಜಿ.ಜಗದೀಶ್, ರಸ್ತೆ ದಾಟುವಾಗ ಮುಂದೆ ಹಾದು ಹೋದ ಸರ್ಕಾರಿ ಬಸ್‌ನಲ್ಲಿ ಬಸ್ ಮುಂದುಗಡೆ ಕುಳಿತಿದ್ದ ಕಂಡಕ್ಟರ್ ಮಾಸ್ಕ್ ಧರಿಸದೇ ಕುಳಿತಿರುವನ್ನು ಗಮನಿಸಿ, ಕೂಡಲೇ ಬಸ್ ನಿಲ್ಲಿಸುವಂತೆ ಸೂಚಿಸಿ, ಕಂಡಕ್ಟರ್‌ಗೆ ತಕ್ಷಣ ಸ್ಥಳದಲ್ಲೇ ದಂಡ ವಿಧಿಸುವಂತೆ ಸ್ಥಳದಲ್ಲಿದ್ದ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಾಹನದಲ್ಲಿದ್ದ ಇತರೆ ಪ್ರಯಾಣಿಕರು ಮಾಸ್ಕ್ ಧರಿಸದಿರುವುದನ್ನು ಕಂಡ ಜಿಲ್ಲಾಧಿಕಾರಿ ಅವರಿಗೂ ದಂಡ ವಿಧಿಸುವಂತೆ ಸೂಚಿಸಿ, ಕಂಡಕ್ಟರ್ ಮಾಸ್ಕ್ ಧರಿಸದೇ ಇದ್ದುದಲ್ಲದೇ , ಬಸ್‌ನಲ್ಲಿದ್ದ ಪ್ರಯಾಣಿಕರಿಗೂ ಮಾಸ್ಕ್ ಧರಿಸಲು ಸೂಚಿಸಿರುವುದನ್ನು ಕಂಡು ಜಿಲ್ಲಾಧಿಕಾರಿ ತೀವ್ರ ತರಾಟೆಗೆ ತೆಗೆದುಕೊಂಡರು.

Leave a Reply

Your email address will not be published. Required fields are marked *

error: Content is protected !!