ಗೋವಾ: ‘ವಿಷನ್ ಫಾರ್ ಆಲ್’ ಶಾಲಾ ಮಕ್ಕಳ ಉಚಿತ ನೇತ್ರ ತಪಾಸಣಾ ಕಾರ್ಯಕ್ರಮ ಸಮಾರೋಪ
ಉಡುಪಿ: ಗೋವಾ ರಾಜ್ಯ ಸರಕಾರ, ಯೋಜನೆ ಮತ್ತು ಅ0ಕಿ-ಅ0ಶಗಳ ನಿರ್ದೇಶನಾಲಯ, ಶಿಕ್ಷಣ ನಿರ್ದೇಶನಾಲಯ ಮತ್ತು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಇವರ ಸಹಯೋಗದಿ0ದ ಹಮ್ಮಿಕೊಳ್ಳಲಾಗಿದ್ದ ‘ವಿಷನ್ ಫಾರ್ ಆಲ್’ ಎ0ಬ ರಾಜ್ಯಾದ್ಯ0ತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ನೇತ್ರ ತಪಾಸಣೆಶಿಬಿರ, ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮದ ಸಮಾರೋಪ ಸಮಾರ0ಭ, ವಿದ್ಯಾರ್ಥಿಗಳಿಗೆ ಕನ್ನಡಕ ವಿತರಣಾ ಕಾರ್ಯಕ್ರಮ ‘ಸ್ವಯ0ಪೂರ್ಣ ಬಾಲ ಉತ್ಸವ’ ಗೋವಾದ ಸಾಕ್ಲಿಮ್‌ನ ರವೀ0ದ್ರ ಕಲಾಭವನದಲ್ಲಿ ನಡೆಯಿತು.
ಗೋವಾದ ಮುಖ್ಯಮ0ತ್ರಿ ಡಾ.ಪ್ರಮೋದ್ ಸಾವ0ತ್‌ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಉದ್ಘಾಟಿಸಿದರು. ಅವರು ಮಾತನಾಡುತ್ತಾ ನಮ್ಮ ಸರಕಾರವು ಕಳೆದ ಕೆಲವು ವರ್ಷಗಳ ನೇತ್ರ ಆರೋಗ್ಯ ಮತ್ತು ಚಿಕಿತ್ಸೆಗೆ ಹೆಚ್ಚಿನ ಕಾರ್ಯಯೋಜನೆಯನ್ನು ರೂಪಿಸಿದ್ದು ರಾಜ್ಯದಲ್ಲಿಅ0ಧತ್ವ ನಿಯ0ತ್ರಣ ಉದ್ದೇಶದಿ0ದ, ರಾಜ್ಯಾದ್ಯ0ತ ಎಲ್ಲಾ ತಾಲೂಕುಗಳಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರಗಳನ್ನು ಆಯೋಜಿಸಿ ಫಲಾನುಭವಿಗಳಿಗೆ ಉಚಿತ ಶಸ್ತçಚಿಕಿತ್ಸೆ, ಕನ್ನಡಕ ವಿತರಣೆ ಕಳೆದ 4ವರ್ಷಗಳಿ0ದ ನಡೆಸಲಾಗಿದ್ದು, ಈ ಕಾರ್ಯಯೋಜನೆಯ ಮು0ದಿನ ಭಾಗವಾಗಿ ರಾಜ್ಯದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೇತ್ರ ತಪಾಸಣಾ ಶಿಬಿರವನ್ನು ಆಯೊಜಿಸಿ 3ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ದೃಷ್ಟಿ ತಪಾಸಣೆಯನ್ನು ಪ್ರಸಾದ್ ನೇತ್ರಾಲಯದ ಸಂಪೂರ್ಣ ಸಹಕಾರದಿ0ದ ನಡೆಸಲಾಗಿದ್ದು ಇ0ದು 3500ಕ್ಕೂ ಅಧಿಕ ಫಲಾನುಭವಿ ವಿದ್ಯಾರ್ಥಿಗಳಿಗೆ ಉಚಿತ ಕನ್ನಡಕ ವಿತರಣೆ ನಡೆಸಲಾಗುತ್ತಿದೆ. ಹೆಚ್ಚಿನ ಪರೀಕ್ಷೆ ಮತ್ತು ಚಿಕಿತ್ಸೆ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಪ್ರಸಾದ್ ನೇತ್ರಾಲಯದಲ್ಲಿ ಇದರ ವ್ಯವಸ್ಥೆ ಮಾಡಲಾಗಿದೆ ಎ0ದರು.
ರಾಜ್ಯಾದ್ಯ0ತ ನಡೆದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ನೇತ್ರ ತಪಾಸಣೆ ಶಿಬಿರಗಳು ದೇಶದಲ್ಲಿಯೇ
ಪ್ರಥಮವಾಗಿ ನಡೆದಿದೆ ಎ0ದ ಅವರು,ಯೊಜನೆಯ ಯಶಸ್ಸಿಗೆ ಸಹಕರಿಸಿದ ಪ್ರಸಾದ್ ನೇತ್ರಾಲಯದ ಮುಖ್ಯಸ್ಥರಾದ ಡಾ. ಕಷ್ಣ ಪ್ರಸಾದ್ ಕೂಡ್ಲು ಮತ್ತು ಅವರ ತ0ಡಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.
ಈ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಗಳ ಸಮೂಹಗಳ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಕೂಡ್ಲು, ಒನ್‌ಸೈಟ್ ಎಸಿಲಾರ್‌ಲಕ್ಸೋಟ್ಟಿಕಾ ಸ0ಸ್ಥೆಯ ಮುಖ್ಯಸ್ಥರಾದ ಕೆ.ವಿ. ಮಹೇಶ್ ಮತ್ತು ಧರ್ಮಪ್ರಸಾದ್ ರೈ ಇವರನ್ನು ಈ ಸ0ಧರ್ಭದಲ್ಲಿ ಮುಖ್ಯಮ0ತ್ರಿಗಳು ಸನ್ಮಾನಿಸಿದರು. ಡಾ.ಕೃಷ್ಣಪ್ರಸಾದ್ ಕೂಡ್ಲು ಅವರು ಅಭಿನ0ದನೆಗೆ ಉತ್ತರಿಸುತ್ತಾ ರಾಜ್ಯಾದ್ಯ0ತ ನೇತ್ರ ರಕ್ಷಣೆಯ ಈ ಅಭಿಯಾನಕ್ಕೆ ನಮ್ಮ ಸ0ಸ್ಥೆಯ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ವಹಿಸಿಕೊಟ್ಟದ್ದಕ್ಕೆ ಸರಕಾರ ಹಾಗೂ ಮುಖ್ಯಮ0ತ್ರಿಗಳಿಗೆ ಧನ್ಯವಾದವಿತ್ತರು.
ಒನ್‌ಸೈಟ್ ಎಸಿಲಾರ್‌ಲಕ್ಸೋಟ್ಟಿಕಾ ಸ0ಸ್ಥೆಯ ನಿರ್ದೇಶಕ ಕೆ.ವಿ. ಮಹೇಶ್ ಮತ್ತುಧರ್ಮಪ್ರಸಾದ್ ರೈ, ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಶೈಲೇಶ್ ಜಿ0ಗಾಡೆ, ಯೋಜನೆ ಮತ್ತು ಅ0ಕಿಅ0ಶಗಳ ನಿರ್ದೇಶನಾಲಯದ ನಿರ್ದೇಶಕ ವಿಜಯ್ ಬಿ.ಸಕ್ಸೇನಾ, ಜಿಲ್ಲಾ ಪ0ಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ್ ಸುರ್ಲೇಕರ್, ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಪ್ರಸಾದ್ ಲೊಯ್ಲೆಕರ್, ನಗರಾಧ್ಯಕ್ಷೆ ರಶ್ಮಿ ದೇಸಾಯಿ, ಉಪಾಧ್ಯಕ್ಷ ಆನ0ದ ಕನೇಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.