ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಬೈಕ್ ರ್ಯಾಲಿ
ಉಡುಪಿ: ಜಿಲ್ಲಾ ಮತ್ತು ಉಡುಪಿ ನಗರ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಬಿಜೆಪಿ ಪಕ್ಷದ ‘ಶಕ್ತಿ ವಂದನ’ ಅಭಿಯಾನದ ಅಂಗವಾಗಿ ಮಂಗಳವಾರ ಬನ್ನಂಜೆ ಶ್ರೀ ನಾರಾಯಣ ಗುರು ವೃತ್ತದಿಂದ ಕಡಿಯಾಳಿ ಬಿಜೆಪಿ ಜಿಲ್ಲಾ ಕಚೇರಿಯವರೆಗೆ ಮಹಿಳಾ ಕಾರ್ಯಕರ್ತರ ಬೃಹತ್ ಬೈಕ್ ರ್ಯಾಲಿ ನಡೆಯಿತು.
ಬಿಜಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ರ್ಯಾಲಿಗೆ ಚಾಲನೆ ನೀಡಿದರು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಬಿಜೆಪಿ ಮುಖಂಡರಾದ ರೇಶ್ಮಾ ಉದಯ ಶೆಟ್ಟಿ, ಶಿಲ್ಪಾ ಜಿ. ಸುವರ್ಣ, ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಪ್ರಮುಖರಾದ ರಾಘವೇಂದ್ರ ಕಿಣಿ, ದಿನೇಶ್ ಅಮೀನ್, ನವೀನ್ ಶೆಟ್ಟಿ ಕುತ್ಯಾರು,ಜಗದೀಶ್ ಕಪ್ಪೆಟ್ಟು, ಶಿವಕುಮಾರ್, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಸುಜಲಾ, ಅಶ್ವಿನಿ ಶೆಟ್ಟಿ ಉಪಸ್ಥಿತರಿದ್ದರು.
ರ್ಯಾಲಿಯು ಬನ್ನಂಜೆ ಶ್ರೀನಾರಾಯಣ ಗುರು ವೃತ್ತದಿಂದ ಪ್ರಾರಂಭಗೊಂಡು ಉಡುಪಿ ಸಿಟಿ ಬಸ್ ನಿಲ್ದಾಣ, ಕಲ್ಸಂಕ, ಕುಂಜಿಬೆಟ್ಟು, ಶಾರದಾ ಕಲ್ಯಾಣ ಮಂಟಪ ಮಾರ್ಗವಾಗಿ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿ ಆವರಣದಲ್ಲಿ ಸಮಾಪನಗೊಂಡಿತು.