ಮಾ.6ರಿಂದ ಕೊಂಕಣ ರೈಲು ಮಾರ್ಗದಲ್ಲಿ 2 ರೈಲುಗಳಿಗೆ ಬೈಂದೂರು, ಕುಂದಾಪುರದಲ್ಲಿ ನಿಲುಗಡೆ
ಉಡುಪಿ, ಮಾ6: ಇಂದಿನಿಂದ ದಾದರ್- ತಿರುನಲ್ವೇಲಿ- ದಾದರ್ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲಿಗೆ ಬೈಂದೂರಿನ ಮೂಕಾಂಬಿಕಾ ರೋಡ್ ನಿಲ್ದಾಣದಲ್ಲಿ ಪ್ರಾಯೋಗಿಕ ನೆಲೆಯಲ್ಲಿ ನಿಲುಗಡೆಯನ್ನು ನೀಡಲಾಗುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ನಂ.22630 ತಿರುನಲ್ವೇಲಿ-ದಾದರ್ ಎಕ್ಸ್ಪ್ರೆಸ್ ಮಾ.6ರಿಂದ ಜೂ.9ರವರೆಗೆ ಮಧ್ಯರಾತ್ರಿ 12:32ಕ್ಕೆ ಬೈಂದೂ ರಿಗೆ ಆಗಮಿಸಿ, 12:34ಕ್ಕೆ ನಿರ್ಗಮಿಸಲಿದೆ. ಜೂ.10ರಿಂದ ಮಾನ್ಸೂನ್ ಸಮಯದಲ್ಲಿ ಮಧ್ಯರಾತ್ರಿ 12:50ಕ್ಕೆ ಆಗಮಿಸಿ 12:52ಕ್ಕೆ ನಿರ್ಗಮಿಸಲಿದೆ.
ಅದೇ ರೀತಿ ರೈಲು ನಂ.22629 ದಾದರ್- ತಿರುನಲ್ವೇಲಿ ಎಕ್ಸ್ಪ್ರೆಸ್ ರೈಲು ಮಾ.7ರಿಂದ ಜೂ.9ರವರೆಗೆ ಬೆಳಗ್ಗೆ 10ಕ್ಕೆ ಬೈಂದೂರಿಗೆ ಆಗಮಿಸಿ 10:02ಕ್ಕೆ ನಿರ್ಗಮಿಸಲಿದೆ. ಜೂ.10ರಿಂದ ಮಾನ್ಸೂನ್ ಅವಧಿಯಲ್ಲಿ ಬೆಳಗ್ಗೆ 11:56ಕ್ಕೆ ಆಗಮಿಸಿ 11:58ಕ್ಕೆ ನಿರ್ಗಮಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕುಂದಾಪುರದಲ್ಲಿ ನಿಲುಗಡೆ: ಇದರೊಂದಿಗೆ ಲೋಕಮಾನ್ಯ ತಿಲಕ್- ಕೊಚ್ಚುವೇಲ್- ಲೋಕಮಾನ್ಯ ತಿಲಕ್ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲಿಗೆ ಕುಂದಾಪುರ ನಿಲ್ದಾಣದಲ್ಲಿ ಪ್ರಾಯೋಗಿಕ ನೆಲೆಯಲ್ಲಿ ನಿಲುಗಡೆಯನ್ನು ನೀಡಲಾಗುತ್ತದೆ ಎಂದೂ ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ನಂ.22113 ಲೋಕಮಾನ್ಯ ತಿಲಕ್-ಕೊಚ್ಚುವೇಲ್ ಎಕ್ಸ್ಪ್ರೆಸ್ ಜೂ.9ರವರೆಗೆ ಬೆಳಗ್ಗೆ 8:00ಕ್ಕೆ ಕುಂದಾಪುರಕ್ಕೆ ಆಗಮಿಸಿ, 8:02ಕ್ಕೆ ನಿರ್ಗಮಿಸಲಿದೆ. ಜೂ.10ರಿಂದ ಮಾನ್ಸೂನ್ ಸಮಯದಲ್ಲಿ ಮುಂಜಾನೆ 6:00ಕ್ಕೆ ಆಗಮಿಸಿ 6:02ಕ್ಕೆ ನಿರ್ಗಮಿಸಲಿದೆ.
ಅದೇ ರೀತಿ ರೈಲು ನಂ.22114 ಕೊಚ್ಚುವೇಲ್- ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ರೈಲು ಮಾ.7ರಿಂದ ಜೂ.9ರವರೆಗೆ ಅಪರಾಹ್ನ 2:02ಕ್ಕೆ ಬೈಂದೂರಿಗೆ ಆಗಮಿಸಿ 2:04ಕ್ಕೆ ನಿರ್ಗಮಿಸಲಿದೆ. ಜೂ.10ರಿಂದ ಮಾನ್ಸೂನ್ ಅವಧಿಯಲ್ಲಿ ಅಪರಾಹ್ನ 2:02ಕ್ಕೆ ಆಗಮಿಸಿ 2:04ಕ್ಕೆ ನಿರ್ಗಮಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.