ಉಡುಪಿ: ಲಯನ್ಸ್ ಜಿಲ್ಲೆ 317 ಸಿಯ ಪ್ರಾಂತ್ಯ 2ರ ಪ್ರಾಂತೀಯ ಸಮ್ಮೇಳನ
ಉಡುಪಿ: ಲಯನ್ಸ್ ಜಿಲ್ಲೆ 317 ಸಿಯ ಪ್ರಾಂತ್ಯ 2ರ ಪ್ರಾಂತೀಯ ಸಮ್ಮೇಳನವು ಪ್ರಾಂತ್ಯಾಧ್ಯಕ್ಷರಾಗಿರುವ ವರ್ವಾಡಿ ಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹೆರ್ಗ ಗಾರ್ಡನ್ಸ್ ನಲ್ಲಿ ವೈಭವದಿಂದ ಜರುಗಿತು.
ಪ್ರಾಂತ್ಯದ ಪ್ರಥಮ ಮಹಿಳೆ ನಿರುಪಮಾಪ್ರಸಾದ್ ಶೆಟ್ಟಿ ದೀಪ ಬೆಳಗಿಸಿ ಸಮ್ಮೇಳನವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಮಂಗಳೂರಿನ ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ ಲಯನ್ಸ್ ಕ್ಲಬ್ ಗಳು ಸೇವಾ ಯೋಜನೆಗಳ ಜೊತೆಗೆ ಯುವ ಜನಾಂಗದಲ್ಲಿ ಮಾನವೀಯ ಮೌಲ್ಯಗಳನ್ನು ಪ್ರೇರೇಪಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಬೇಕೆಂದು ಕರೆ ನೀಡಿದರು.
ಮಲ್ಟಿಪಲ್ ಕೌನ್ಸಿಲ್ 317 ನ ಉಪಾಧ್ಯಕ್ಷ ಸಂಜೀತ್ ಶೆಟ್ಟಿ ಗೌರವ ಅತಿಥಿಯಾಗಿ ಪಾಲ್ಗೊಂಡು ಪ್ರಾಂತ್ಯ 2ರ ಸೇವಾ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಂತೀಯ ಸಮ್ಮೇಳನದ ಅಂಗವಾಗಿ ಉಡುಪಿಯ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ರೂ. 3 ಲಕ್ಷ ವೆಚ್ಚದಲ್ಲಿ ಅಂಡರ್ ಗ್ರೌಂಡ್ ನೀರಿನ ತೊಟ್ಟಿ ಕೊಡುಗೆ, ಹಲವಾರು ಶಾಲೆಗಳಿಗೆ ದೇಣಿಗೆ, ಅರ್ಹ ವಿದ್ಯಾರ್ಥಿಗೆ ಲ್ಯಾಪ್ ಟಾಪ್ ವಿತರಣೆ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ಮಹಿಳೆಯೋರ್ವರಿಗೆ ವ್ಹೀಲ್ ಚೇರ್ ಹಸ್ತಾಂತರ ಸಹಿತ ಹಲವಾರು ಸೇವಾ ಕಾರ್ಯಗಳು ನಡೆಸಲಾಯಿತು.
ಪ್ರಾಂತ್ಯಾಧ್ಯಕ್ಷ ವರ್ವಾಡಿ ಪ್ರಸಾದ್ ಶೆಟ್ಟಿ ಮಾತನಾಡಿ, ಅಂತಾರಾಷ್ಟೀಯ ಲಯನ್ಸ್ ಸಂಸ್ಥೆಯಲ್ಲಿ ತೊಡಗಿಕೊಳ್ಳುವ ಮೂಲಕ ಮಾಡುವ ಸೇವೆಗೆ ಸಾರ್ಥಕತೆ ಸಿಕ್ಕಿದೆ ಎಂದರು. ಈ ಸಂದರ್ಭದಲ್ಲಿ ಸಮ್ಮೇಳನ ಸಮಿತಿ ವತಿಯಿಂದ ಪ್ರಸಾದ್ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಮಾಜಿ ಜಿಲ್ಲಾ ಗವರ್ನರ್ ಡಾ. ಎ. ರವೀಂದ್ರನಾಥ್ ಶೆಟ್ಟಿ ಅವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿ ತು. 10 ಮಂದಿ ಹೊಸ ಎಂಜೆಎಫ್ ಗಳಿಗೆ ಬೆಳ್ಳಿ ಪದಕ ವಿತರಿಸಲಾಯಿತು. ಪ್ರಥಮ ಉಪ ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್, ಜಿಲ್ಲಾ ಸಂಪುಟ ಕಾರ್ಯದರ್ಶಿ ರವಿರಾಜ್ ನಾಯಕ್, ಪ್ರಾಂತ್ಯ ಕಾರ್ಯದರ್ಶಿ ಅಲೆವೂರು ದಿನೇಶ್ ಕಿಣಿ, ವಲಯಾಧ್ಯಕ್ಷರುಗಳಾದ ರವೀಂದ್ರನಾಥ್ ಹೆಗ್ಡೆ, ಅರುಣ್ ಕುಮಾರ್ ಶೆಟ್ಟಿ, ನಾರಾಯಣ ಬಿ. ಎಸ್., ಇತರ ಪ್ರಾಂತ್ಯಗಳ ಅಧ್ಯಕ್ಷರುಗಳಾದ ಗಿರಿಜಾ ಶಿವರಾಮ್ ಶೆಟ್ಟಿ, ಋಷಿಕೇಶ್ ಹೆಗ್ಡೆ, ಜಿತೇಂದ್ರ ಫುರ್ಟಾಡೊ, ದೀನ್ ಪಾಲ್ ಶೆಟ್ಟಿ, ಏಕನಾಥ್ ಬೋಳಾರ್, ಓಂಕಾರಪ್ಪ, ಉಡುಪಿ ಲಯನ್ಸ್ ಅಧ್ಯಕ್ಷ ರವೀಶ್ಚಂದ್ರ ಶೆಟ್ಟಿ, ಜಿಲ್ಲಾ ಲಿಯೊ ಕೊ-ಆರ್ಡಿನೇಟರ್ ಆದಿತ್ಯ ಶೇಟ್, ಉಡುಪಿ ಲಯನ್ ಲೇಡಿ ಕೌನ್ಸಿಲ್ ಅಧ್ಯಕ್ಷೆ ಮಾಲಿನಿ ಉದಯ ಶೆಟ್ಟಿ , ಸಮ್ಮೇಳನ ಸಮಿತಿ ಖಜಾಂಜಿ ಬಾಲಕೃಷ್ಣ ಹೆಗ್ಡೆ ಮತ್ತಿತರರಿದ್ದರು.
ಸಮ್ಮೇಳನ ಸಮಿತಿ ಅಧ್ಯಕ್ಷ ಎಸ್. ರಾಜಗೋಪಾಲ್ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ಲೂಯಿಸ್ ಲೋಬೊ ವಂದಿಸಿದರು. ಅಕ್ಷಯ್ ಹೆಗ್ಡೆ ಮೊಳಹಳ್ಳಿ ಹಾಗೂ ಅಲೆವೂರು ಹರೀಶ್ ಕಿಣಿ ಕಾರ್ಯಕ್ರಮ ನಿರೂಪಿಸಿದರು. ಸಾಧನಾ ಕಿಣಿ, ಶಿಲ್ಪಾ ಸುದರ್ಶನ್, ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಜ್ಯೋತಿ ರಮೇಶ್ ಅತಿಥಿಗಳನ್ನು ಪರಿಚಯಿಸಿದರು. ಈಶ್ವರ ಚಿಟ್ಪಾಡಿ ಹಾಗೂ ಜಗನ್ನಾಥ್ ಕಡೆಕಾರ್ ಅಭಿನಂದನಾ ಪತ್ರ ಓದಿದರು.