ಅಲೆವೂರು ನೆಹರು ಸ್ಪೋರ್ಟ್ಸ್& ಕಲ್ಚರ್ ಅಸೋಸಿಯೇಷನ್ 34 ನೇ ವಾರ್ಷಿಕೋತ್ಸವ
ಉಡುಪಿ: ನೆಹರು ಸ್ಪೋರ್ಟ್ಸ್& ಕಲ್ಚರ್ ಅಸೋಸಿಯೇಷನ್ ಅಲೆವೂರು ಇದರ 34ನೇ ವಾರ್ಷಿಕೋತ್ಸವ ಸಮಾರಂಭ ಗುರುವಾರ ನಡೆಯಿತು.
ಸಂಸ್ಥೆಯ ಅಧ್ಯಕ್ಷರಾದ ದಯಾನಂದ ಅಂಚನ್ ರವರು ಅಧ್ಯಕ್ಷತೆ ವಹಿಸಿದ್ದರು.ಹಿರಿಯ ಸಬ್ ರಿಜಿಸ್ಟ್ರಾರ್ ಕೀರ್ತಿ ಕುಮಾರಿ, ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ರವಿರಾಜ್ ನಾಯಕ್, ಯುವಉದ್ಯಮಿ ಸುಭಾಷ್ ಸಾಲಿಯಾನ್, ಗ್ರಾಮ ಪಂಚಾಯಿತಿ ಸದಸ್ಯ ಜಲೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕೊರಂಗ್ರಪಾಡಿ ಸಿ.ಎ.ಬ್ಯಾಂಕ್ನ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಖರ್ ಸುವರ್ಣ ಇವರನ್ನು ಸನ್ಮಾನಿಸಲಾಯಿತು. ಪ್ರತಿಬಾನ್ವಿತ ವಿದ್ಯಾರ್ಥಿಗಳಾದ ಅದಿತಿ ಕಿಣಿ, ಆದಿತ್ಯ ಕಾಮತ್, ನಿಧಿ ಪೂಜಾರಿ, ಮನೋನ್ಯ ಭಟ್, ರಮ್ಯಾ ಇವರನ್ನು ಗೌರವಿಸಲಾಯಿತು. ಸಂಸ್ಥೆಯ ಗೌರವ ಅಧ್ಯಕ್ಷರಾದ ಹರೀಶ್ ಕಿಣಿ, ಗೌರವ ಸಲಹೆಗಾರರದ ಸತೀಶ್ ಪೂಜಾರಿ, ಮುರಳೀಧರ್ ಭಟ್, ಶೇಖರ್ ಕಲ್ಮಾಡಿ, ಸಾಂಸ್ಕೃತಿಕ ಕಾರ್ಯದರ್ಶಿ ಜಯ ಸೇರಿಗಾರ್ ಉಪಸ್ಥಿತರಿದ್ದರು. ಗುರುರಾಜ್ ಸಾಮಗ, ಪ್ರತಾಪ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಜಯಕರ್ ಪೂಜಾರಿ ವಂದಿಸಿದರು. ಬಳಿಕ “ಪುದರ್ ದೀದಾಂಡು’ ನಾಟಕ ಪ್ರದರ್ಶನಗೊಂಡಿತು.