ಉಡುಪಿ: 10ನೇ ವರ್ಷದ ಸಂಭ್ರಮದಲ್ಲಿ “ಅಂಕಿತ ಸ್ಟುಡಿಯೋ”
ಉಡುಪಿ(ಉಡುಪಿ ಟೈಮ್ಸ್ ವರದಿ): ಉಡುಪಿ ಡಯಾನಾ ಸರ್ಕಲ್ ನ ಕೋರ್ಟ್ ರಸ್ತೆಯ ಪಾಂಡುರಂಗ ಟವರ್ಸ್ ನಲ್ಲಿ ಕಳೆದ ಹತ್ತು ವರ್ಷಗಳಿಂದ ಗ್ರಾಹಕರ ಮನ ಗೆದ್ದಿರುವ ಅಂಕಿತ ಸ್ಟುಡಿಯೋ ಇದೀಗ ಯಶಸ್ವಿಯಾಗಿ 11ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ.
ಇದೇ ಸುಸಂದರ್ಭದಲ್ಲಿ ಅ.18 ಭಾನುವಾರ ಕೋರ್ಟ್ ರಸ್ತೆಯ ತುಳುನಾಡು ಟವರ್ಸ್ ಗೆ ನೂತನ ಸ್ಟುಡಿಯೋ ಸ್ಥಳಾಂತರಗೊಳ್ಳಲಿದೆ. ಇದರ ಉದ್ಘಾಟನೆಯನ್ನು ಹಿರಿಯ ಛಾಯಾಗ್ರಾಹಕ ನವೀನಚಂದ್ರ ಬಲ್ಲಾಳ್ ಉಡುಪಿ ಇವರು ನೆರವೇರಿಸಲಿರುವರು. ಮುಖ್ಯ ಅತಿಥಿಯಾಗಿ ವಿಠ್ಠಲ್ ಅಂಚನ್ ಉದ್ಯಾವರ, ಸದಾಶಿವ ಕೋಟ್ಯಾನ್ ಉದ್ಯಾವರ, ಎಸ್.ಕೆ ಪಿ. ಎ ದ.ಕ ಹಾಗೂ ಉಡುಪಿ ಅಧ್ಯಕ್ಷ ಶ್ರೀಧರ್ ಶೆಟ್ಟಿಗಾರ್, ಎಸ್.ಕೆ.ಪಿ.ಎ ಉಡುಪಿ ವಲಯ ಅಧ್ಯಕ್ಷ ಪ್ರಕಾಶ್ ಶೇರಿಗಾರ್ ಇವರು ಉಪಸ್ಥಿತರಿರುವರು.
ಗ್ರಾಹಕರ ಅಭಿರುಚಿಗೆ ತಕ್ಕಂತೆ ಇಲ್ಲಿ ಫೋಟೋಗ್ರಾಫಿ, ವಿಡಿಯೋಗ್ರಾಫಿ, ಡ್ರೋನ್, ಫೋಟೋ ಲ್ಯಾಮಿನೇಷನ್, ಫೋಟೋ ಫ್ರೇಮ್ಸ್, ಮಗ್ ಪ್ರಿಂಟಿಂಗ್, ಮೊಬೈಲ್ ಕವರ್ ಪ್ರಿಂಟಿಂಗ್ ಹಾಗೂ ಫೋಟೋಗ್ರಾಫಿಗೆ ಸಂಬಂಧಪಟ್ಟ ಎಲ್ಲ ರೀತಿಯ ಸೇವೆಯನ್ನು ಕ್ಲಪ್ತ ಸಮಯದಲ್ಲಿ ನೀಡಲಾಗುವುದೆಂದು ಸಂಸ್ಥೆಯ ಮಾಲಕರಾದ ಧನಂಜಯ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.