ಕುಂದಾಪುರ: ಐಎಂಜೆ ವಿದ್ಯಾರ್ಥಿಗಳ ಇಂಡಸ್ಟ್ರಿಯಲ್ ವಿಸಿಟ್
ಕುಂದಾಪುರ, ಫೆ.28: ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಕಾಲೇಜು, ಮೂಡ್ಲಕಟ್ಟೆ ಇದರ ಕಾಮರ್ಸ್ ಅಸೋಸಿಯೇಷನ್ ವೇದಿಕೆಯ ವತಿಯಿಂದ ಇಂಡಸ್ಟ್ರಿಯಲ್ ವಿಸಿಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಂಸ್ಥೆಯ ಬಿಕಾಂ ಹಾಗೂ ಬಿಬಿಎ ವಿದ್ಯಾರ್ಥಿಗಳು ಆನೆಗುಡ್ಡೆ ಉಪಾಧ್ಯಾಯ ಇಂಡಸ್ಟ್ರೀಸ್, “ಚಂದನ” ವಕ್ವಾಡಿಗೆ ಭೇಟಿ ನೀಡುವುದರ ಮೂಲಕ ಪ್ರಾಯೋಗಿಕವಾಗಿ ಫುಡ್ ಪ್ರೋಸೆಸ್ಸಿಂಗ್ ಸಿಸ್ಟಮ್ ನ ವಿವಿಧ ಆಯಾಮಗಳ ಬಗ್ಗೆ ಮಾಹಿತಿ ತಿಳಿದು ಕೊಂಡರು.
ವಿದ್ಯಾರ್ಥಿಗಳೊಂದಿಗೆ ವಾಣಿಜ್ಯ ಉಪನ್ಯಾಸಕಿ ಭಾಗ್ಯಶ್ರೀ ಹಾಗೂ ದೈಹಿಕ ಶಿಕ್ಷಕರಾದ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.