ಉಡುಪಿ: ಕಾನ್ಸ್‌ಟೇಬಲ್ ಹುದ್ದೆ ನೇಮಕಾತಿ – ಅ.18 ರಂದು ಲಿಖಿತ ಪರೀಕ್ಷೆ

ಉಡುಪಿ, ಅ.16: ಕರ್ನಾಟಕ ರಾಜ್ಯ ಪೊಲೀಸ್  ಇಲಾಖೆಯ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅಕ್ಟೋಬರ್ 18 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲೆಯ ಪರೀಕ್ಷಾ ಕೇಂದ್ರಗಳಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಉಡುಪಿ, ಮಿಲಾಗ್ರೀಸ್ ಯುನಿವರ್ಸಿಟಿ ಕಾಲೇಜು ಮತ್ತು ಪ್ರೀ-ಯುನಿವರ್ಸಿಟಿ ಕಾಲೇಜು ಕಲ್ಯಾಣಪುರ ಉಡುಪಿ, ಡಾ.ಜಿ.ಶಂಕರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಉಡುಪಿ, ಮಹಿಳಾ ಸರ್ಕಾರಿ ಪ್ರೀ-ಯುನಿವರ್ಸಿಟಿ & ಸರ್ಕಾರಿ ಪ್ರೌಢ ಶಾಲೆ ಕಾಲೇಜು ಉಡುಪಿ,

ಪೂರ್ಣಪ್ರಜ್ಞ ಯುನಿವರ್ಸಿಟಿ ಕಾಲೇಜು ಉಡುಪಿ, ಪೂರ್ಣಪ್ರಜ್ಞ ಪ್ರೀ-ಯುನಿವರ್ಸಿಟಿ ಕಾಲೇಜು ಉಡುಪಿ, ಮಹಾತ್ಮ ಗಾಂಧೀ ಮೆಮೋರಿಯಲ್ ಪ್ರೀ-ಯುನಿವರ್ಸಿಟಿ ಕಾಲೇಜು ಕುಂಜಿಬೆಟ್ಟು ಉಡುಪಿ, ಮಹಾತ್ಮ ಗಾಂಧೀ ಮೆಮೋರಿಯಲ್ ಯುನಿವರ್ಸಿಟಿ ಕಾಲೇಜು ಕುಂಜಿಬೆಟ್ಟು ಉಡುಪಿ, ವಿದ್ಯೋದಯ ಪ್ರೀ-ಯುನಿವರ್ಸಿಟಿ ಕಾಲೇಜು ವಾದಿರಾಜ ರೋಡ್ ಉಡುಪಿ, ಮೌಂಟ್ ರೋಸರಿ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಕಲ್ಯಾಣಪುರ ಸಂತೆಕಟ್ಟೆ ಉಡುಪಿ, ಸರ್ಕಾರಿ ಪಿಯು ಕಾಲೇಜು ಬೋರ್ಡ್ ಹೈಸ್ಕೂಲ್ ಉಡುಪಿ, ಕೆ.ಎಮ್.ಸಿ ಇಂಟರ್‍ಯಾಕ್ಟ್ ಲೆಕ್ಚರ್ ಹಾಲ್ ನಿಯರ್ ಆಂಟನಿ ಮ್ಯುಸಿಯಂ ಮಣಿಪಾಲ ಇಲ್ಲಿ ಲಿಖಿತ ಪರೀಕ್ಷೆ ನಡೆಯಲಿದ್ದು,

ಅಭ್ಯರ್ಥಿಗಳು ಪರೀಕ್ಷೆಯ ಪ್ರವೇಶ ಪತ್ರ, ನಿಗದಿತ ಗುರುತಿನ ಚೀಟಿ ಹಾಗೂ ಮಾಸ್ಕ್ ಧರಿಸಿಕೊಂಡು ಪರೀಕ್ಷಾ ಕೇಂದ್ರಕ್ಕೆ ಬರುವಂತೆ ಸೂಚಿಸಿದೆ.  

ಹೆಚ್ಚಿನ ಮಾಹಿತಿಗಾಗಿ ಮತ್ತು ಲಿಖಿತ ಪರೀಕ್ಷೆಯ ಪ್ರವೇಶ ಪತ್ರಕ್ಕಾಗಿ ಇಲಾಖೆಯ ವೆಬ್‌ಸೈಟ್ www.ksp.gov.in ನ್ನು ಪರಿಶೀಲಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!