ಕಜ್ಕೆ: ಶ್ರೀ ಅನ್ನಪೂರ್ಣೇಶ್ವರಿ ಪ್ರತಿಷ್ಠೆ, ಕುಂಭಾಭಿಷೇಕ
ಬ್ರಹ್ಮಾವರ, ಫೆ.22: ಮನಸ್ಸಿನಲ್ಲೇ ದೇವಸ್ಥಾನ ನಿರ್ಮಿಸಿ ಭಕ್ತಿಯನ್ನು ಪ್ರತಿಷ್ಠಾಪಿಸಿದಾಗ ಭಗವಂತನು ಒಲಿಯುತ್ತಾನೆ ಎಂದು ಶಹಪುರ ಶ್ರೀ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಹೇಳಿದರು.
ಅವರು ಬುಧವಾರ ನಾಲ್ಕೂರು ಗ್ರಾಮದ ಕಜ್ಕೆಯಲ್ಲಿ ಅರೆಮಾದನಹಳ್ಳಿ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನ ದಲ್ಲಿ ಶ್ರೀಅನ್ನಪೂರ್ಣೇಶ್ವರೀ, ಶ್ರೀಗಣಪತಿ ಮತ್ತು ಶ್ರೀಆದಿಶಂಕರಾಚಾರ್ಯರ ಶಿಲಾ ಬಿಂಬ ಪ್ರತಿಷ್ಠೆ ಹಾಗೂ ಮಹಾ ಕುಂಭಾಭಿಷೇಕ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಕೇಮಾರಿನ ಶ್ರೀಈಶ ವಿಠಲದಾಸ ಸ್ವಾಮೀಜಿ ಅವರು, ದೇವಸ್ಥಾನಗಳು ಜ್ಞಾನ, ಭಕ್ತಿಯ ಕೇಂದ್ರವಾಗಬೇಕೇ ವಿನಃ ವಾಣಿಜ್ಯ, ವ್ಯಾಪಾರೀ ಸ್ಥಳವಾಗಬಾರದು. ಧಾರ್ಮಿಕ ಕೇಂದ್ರಗಳಿಂದ ಧನಾತ್ಮಕ ಚಿಂತನೆ ಮೂಡಿ ಸಮಾಜ ಒಗ್ಗೂಡಲಿ ಎಂದರು. ವಡ್ನಾಳ್ ಸಾವಿತ್ರಿ ಪೀಠದ ಶ್ರೀ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ಭಕ್ತಿ ಹಾಗೂ ವೈರಾಗ್ಯ ಮಾರ್ಗದಿಂದ ಜೀವನ ಸಾರ್ಥಕವಾಗಲಿ ಎಂದರು.
ದಕ್ಷಿಣ ಬೆಂಗಳೂರು ಶ್ರೀಆದಿಶಂಕರಾಚಾರ್ಯ ಜಗದ್ಗುರು ಪೀಠದ ಶ್ರೀಶಿವಾನಂದ ಭಾರತಿ ಸ್ವಾಮೀಜಿ, ಸನ್ಮಾರ್ಗದಲ್ಲಿ ಮುನ್ನಡೆದು ಪುಣ್ಯ ಸಂಪಾದಿಸಿ ಎಂದರು. ಶ್ರೀಶಿವಸುಜ್ಞಾನತೀರ್ಥ ಸ್ವಾಮೀಜಿ ಅವರು, ಸರ್ವರ ಸಹಕಾರದಿಂದ ಕಜ್ಕೆ ಕ್ಷೇತ್ರ ನಿರ್ಮಾಣಗೊಂಡಿ ದ್ದು, ಎಲ್ಲರಿಗೂ ಒಳಿತಾಗಲಿ ಎಂದರು.
ಈ ಸಂದರ್ಭ ಪ್ರಮುಖರಾದ ಪ್ರಸಾದ್ರಾಜ್ ಕಾಂಚನ್, ವಸಂತಾ ಮುರಳಿ ಆಚಾರ್ಯ, ಡಾ. ಉಮೇಶ್ ಆಚಾರ್ಯ, ಡಾ.ಜಿ.ರಾಮಕೃಷ್ಣ ಆಚಾರ್, ವಿಠಲ್ ಬೆಳಂದೂರು, ಶ್ರೀಧರ ಆಚಾರ್ಯ, ಎಚ್. ರಾಜೇಶ್ ಆಚಾರ್ಯ, ಮೆಠದಬೆಟ್ಟು ಹೆಬ್ರಿ, ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು, ಪ್ರವೀಣ ಆಚಾರ್ಯ ರಂಗನಕೆರೆ, ಶ್ರೀಧರ ಕಾಮತ್, ಕೃಷ್ಣಯ್ಯ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಬೆಳಗಾಂ, ಎಚ್.ಬಿ. ಕುಮಾರ ಆಚಾರ್ಯ ಹಾಸನ, ಶಂಕರ ಆಚಾರ್ಯ ಸಾಗರ, ರಮೇಶ್ ಶಿವಮೊಗ್ಗ, ಸರ್ವೇಶ್ವರ ಆಚಾರ್ಯ ಅತ್ತಿಬೆಲೆ, ಚಿಕ್ಕಣ್ಣ ಆಚಾರ್ಯ ಬೆಂಗಳೂರು, ಕಾಶೀನಾಥ ಶೆಣೈ, ನೇಜಾರು ವಿಶ್ವನಾಥ ರಾವ್, ಕರುಣಾಕರ ಶೆಟ್ಟಿ ಕಜ್ಕೆ, ಖಜಾನೆ ಸುಕುಮಾರ್ ಆಚಾರ್ಯ ಮುನಿಯಾಲು, ರವೀಂದ್ರ ಆಚಾರ್ಯ ಪಕ್ಕಾಲು, ಭಾಸ್ಕರ ಆಚಾರ್ಯ ಮುದ್ರಾಡಿ, ಎ. ಮಂಜುನಾಥ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಸಹಿತ ವಿವಿಧ ಗಣ್ಯರು ಪಾಲ್ಗೊಂಡರು.
ಟಿ.ಜಿ. ಆಚಾರ್ಯ ಸ್ವಾಗತಿಸಿ, ರಾಜೇಶ ಆಚಾರ್ಯ ಸಾಂತ್ಯಾರು, ಪ್ರಕಾಶ ಆಚಾರ್ಯ ಕುಕ್ಕೆಹಳ್ಳಿ ನಿರೂಪಿಸಿ, ಉದಯ ಆಚಾರ್ಯ ಗೋಳಿಯಂಗಡಿ ವಂದಿಸಿದರು.