ಕುಂದಾಪುರ: ಸಾಲ ಪಾವತಿಸಲಾಗದೆ ಮೀನುಗಾರ ಆತ್ಮಹತ್ಯೆ
ಉಡುಪಿ: ಫೆ.22: ದೋಣಿ ಖರೀದಿಸಲು ಸಾಲ ಮಾಡಿದ್ದ ಮೀನುಗಾರರೊಬ್ಬರು ಸಾಲ ಪಾವತಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಬುಧವಾರ ಸಂಜೆ ವೇಳೆ ನಡೆದಿದೆ.
ಮೃತ ವ್ಯಕ್ತಿಯನ್ನು ಗಂಗೊಳ್ಳಿಯ ಕಿರಣ್(32) ಎಂದು ಗುರುತಿಸಲಾಗಿದೆ. ಇವರು ಮೀನುಗಾರಿಕೆಗಾಗಿ ಬ್ಯಾಂಕಿನಲ್ಲಿ ಸಾಲ ಮಾಡಿ ದೋಣಿ ಖರೀದಿಸಿದ್ದರು. ಇತ್ತೀಚೆಗೆ ಸರಿಯಾಗಿ ಮೀನುಗಾರಿಕೆ ಆಗುತ್ತಿರಲಿಲ್ಲ. ಇದಲ್ಲದೇ ಕಿರಣ್ ಅವರು ಜನರಿಂದ ಕೈ ಸಾಲವನ್ನೂ ತೆಗೆದುಕೊಂಡಿದ್ದರು ಎನ್ನಲಾಗಿದೆ.
ಸಾಲ ಮರುಪಾವತಿಸಲಾಗದೇ ಮನನೊಂದ ಕಿರಣ್, ಮನೆಯ ಬೆಡ್ರೂಮಿನ ಪಕ್ಕಾಸಿಗೆ ಮೀನಿನ ಬಲೆಯ ರೋಪ್ ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.