ಕೊರೋನಾ ಬಿಕ್ಕಟ್ಟಿನ ನಡುವೆ ಆಪರೇಷನ್ ಕಮಲ! ಕೇಸರಿ ಪಕ್ಷ ಸೇರಿದ ಕಾಂಗ್ರೆಸ್ ಮುಖಂಡ

ಬೆಂಗಳೂರು: ಕೊರೋನಾ ಸಾಂಕ್ರಾಮಿಕದ ನಡುವೆ ರಾಜ್ಯ ರಾಜಕೀಯದಲ್ಲಿ ಭಾರೀ ಚಟುವಟಿಕೆಗಳು ನಡೆಯುತ್ತಿದೆ. ಇಂದು ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಂತೆ ‘ಆಪರೇಷನ್ ಕಮಲ” ಮತ್ತೆ ಚುರುಕಾಗಿದೆ.

ಕಾಂಗ್ರೆಸ್ ಮುಖಂಡ ಮತ್ತು ಟಿ ದಾಸರಹಳ್ಳಿ ಕ್ಷೇತ್ರದ ಬಿಬಿಎಂಪಿ ಸದಸ್ಯೆಯ ಪತಿ ತಿಮ್ಮನಂಜಯ್ಯ ಬಿಜೆಪಿಗೆ ಸೇರಿದರು.

ಟಿ ದಾಸರಹಳ್ಲಿಯ ಮಾಜಿ ಬಿಜೆಪಿ ಶಾಸಕ ಎಸ್ ಮುನಿರಾಜು ಕೊರೋನಾವೈರಸ್ ಕಾರಣದಿಂದಾಗಿ ಲಾಕ್ ಡೌನ್  ಸಮಯದಲ್ಲಿ ತೊಂದರೆಯಲ್ಲಿದ್ದ ಜನರಿಗೆ ಸಹಾಯ ಮಾಡಲು ಪಟ್ಟುಬಿಡದೆ ಕೆಲಸ ಮಾಡಿದರು. ಅವರು ಅನೇಕ ಜನರಿಗೆ ದಿನಸಿ ಮತ್ತು ತರಕಾರಿಗಳನ್ನು ಪೂರೈಸಿದ್ದರು. ಈ ಸಮಯದಲ್ಲಿ, ಅವರು ಕ್ಷೇತ್ರದ ‘ಆಪರೇಷನ್ ಕಮಲ’ಕ್ಕೆ ಸಕ್ರಿಯವಾಗಿ ಪ್ರಚೋದನೆಯನ್ನು ನೀಡಿದರು ಮತ್ತು ಪಕ್ಷಕ್ಕೆ ಸೇರಲು ತಿಮ್ಮನಂಜಯ್ಯನಬ್ವರನ್ನು ಸೆಳೆಯಲು ಯಶಸ್ವಿಯಾಗಿದ್ದಾಗಿ ಹೇಳಲಾಗಿದೆ.

ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುವ ನಗರದ  ಪೀಣ್ಯ ಕೈಗಾರಿಕಾ ಪ್ರದೇಶದ ವಾರ್ಡ್‌ನಿಂದ ತಿಮ್ಮನಂಜಯ್ಯ ಅವರ ಪತ್ನಿ ಲಲಿತಾ ಸಧ್ಯ ಕ್ಷೇತ್ರದ ಕಾರ್ಪೋರೇಟರ್ ಆಗಿದ್ದಾರೆ.

ತಿಮ್ಮನಂಜಯ್ಯ ಬಿಜೆಪಿಗೆ ಸೇರ್ಪಡೆಯಾಗಿದ್ದು ಆ ಪ್ರದೇಶದ ಕಾಂಗ್ರೆಸ್ ನಾಯಕರಲ್ಲಿ ಆಘಾತವನ್ನುಂಟು ಮಾಡಿದೆ. ಇನ್ನೂ ಹಲವಾರು ಕಾಂಗ್ರೆಸ್ ಸದಸ್ಯರು ಕೇಸರಿ ಪಕ್ಷಕ್ಕೆ ಸೇರುವ ಹಾದಿಯಲ್ಲಿದ್ದಾರೆ ಎಂದು ಬಿಜೆಪಿ ನಾಯಕರ ಇತ್ತೀಚಿನ ಹೇಳಿಕೆಯ ಹಿನ್ನೆಲೆಯಲ್ಲಿ ಕೈ ಪಾಳಯದಲ್ಲಿ ಢಡವ ಶುರುವಾಗಿದೆ.

ಟಿ ದಾಸರಹಳ್ಳಿಯ ಬಗಲಕುಂಟೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ತಿಮ್ಮನಂಜಯ್ಯ ಬಿಜೆಪಿಗೆ ಸೇರಿದರು. ಮಾಜಿ ಬಿಜೆಪಿ ಶಾಸಕ ಮುನಿರಾಜು, ಕ್ಷೇತ್ರದ ಬಿಜೆಪಿ ನಾಯಕ ಲೋಕೇಶ್, ನರಸಿಂಹಮೂರ್ತಿ, ಸಿ ಎಂ ನಾಗರಾಜು, ಉಮಾದೇವಿ ಮುಂತಾದ ನಾಯಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!