ಹೆಬ್ರಿ: ಪೊಲೀಸರಿಗೆ ಹಲ್ಲೆ ಯತ್ನಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು
ಹೆಬ್ರಿ, ಫೆ.20: ಕಟ್ಟಿಗೆಗೆ ಬೆಂಕಿ ಹಾಕುತ್ತಿರುವುದನ್ನು ವಿಚಾರಿಸಿದಕ್ಕಾಗಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ಫೆ.18ರಂದು ಸಂಜೆ ಬೇಳಂಜೆ ಎಂಬಲ್ಲಿ ನಡೆದಿದೆ.
ಬೇಳಂಜೆ ನಿವಾಸಿ ರಾಜೇಶ ಎಂಬಾತ ಕಟ್ಟಿಗೆಗೆ ಬೆಂಕಿ ಹಾಕುತ್ತಿರುವ ಕುರಿತ ಮಾಹಿತಿಯಂತೆ ಸ್ಥಳಕ್ಕೆ ಪೊಲೀಸ್ ವಾಹನದಲ್ಲಿ ಆಗಮಿಸಿದ ಮಹಿಳಾ ಹೆಡ್ಕಾನ್ಸ್ಟೇಬಲ್ ರಶ್ಮೀ ಅವರು ಘಟನೆಯ ಬಗ್ಗೆ ವಿಚಾರಿಸಿದರು.
ಈ ವೇಳೆ ರಾಜೇಶ್ ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದು, ಕಟ್ಟಿಗೆ ತೆಗೆದುಕೊಂಡು ರಶ್ಮೀ ಹಾಗೂ ಚಾಲಕ ಆನಂದ ಎಂಬವರಿಗೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಹಾಕಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.