ದೇಶದಲ್ಲಿ ಮೂರು ಸಾವಿರ ಕಾನೂನು ಬಾಹಿರ ಚರ್ಚ್‌ಗಳಿವೆ: ಮುತಾಲಿಕ್
ಕೊಪ್ಪಳ: ದೇಶದಲ್ಲಿ ಮೂರು ಸಾವಿರ್ ಚರ್ಚ್‌ಗಳು ಕಾನೂನು ಬಾಹಿರವಾಗಿದ್ದು ಅನಧಿಕೃತ ಚರ್ಚ್‌ಗಳನ್ನು ಬುಲ್ಡೋಜರ್ ಬಳಸಿ ಒಡೆಯಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸೋಮವಾರ ವಿವಾದಿತ ಹೇಳಿಕೆ ನೀಡಿದ್ದಾರೆ.
ಲಂಬಾಣಿ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವ ಯತ್ನ ನಡೆಯುತ್ತಿದೆ. ಅವರ ಮುಗ್ದತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ . ಮತಾಂತರ ಅನ್ನೋದು ದೇಶಕ್ಕೆ ಅಂಟಿಕೊಂಡಿರುವ ದೊಡ್ಡ ವೈರಸ್ ಮತ್ತು ಕ್ಯಾನ್ಸರ್ ಆಗಿದ್ದು, ಮತಾಂತರ ನಿಷೇಧ ಕಾನೂನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು ಎಂದರು.
ವಸತಿ ಶಾಲೆಗಳ ಬರಹ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ಮೊದಲಿನಿಂದಲೂ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್‌ನವರು ಬಾಬರ್ ಪರವಾಗಿ ನಿಂತರೇ ವಿನಃ ರಾಮನ ಪರವಾಗಿ ನಿಲ್ಲಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಹಿಂದೂಗಳ ಮೇಲೆ ದೌರ್ಜನ್ಯ ಮಾಡುತ್ತಿದೆ. ಕೈ ಮುಗಿದು ಒಳಗೆ ಬಾ ಅಂದರೆ ಕಾಂಗ್ರೆಸ್‌ನವರಿಗೆ ಏನು ತೊಂದರೆ? ಗಣೇಶ ಹಬ್ಬ ಮಾಡಿದರೆ, ಸರಸ್ವತಿ ಪೂಜೆ ಮಾಡಿದರೆ ನಿಮಗೇನು ತೊಂದರೆ? ಎಂದು ಪ್ರಶ್ನಿಸಿದರು. ಮುಸ್ಲಿರ ಓಲೈಕೆಗಾಗಿ ಈ ರೀತಿ ಸರ್ಕಾರ ಮಾಡುತ್ತಿದ್ದು,ಹೇಗೆ ಬೇಕೋ ಹಾಗೆ ಬದಲಾಯಿಸುತ್ತಿದೆ . ಸಿಎಂ ಸಿದ್ದರಾಮಯ್ಯ ಅವರಿಗೆ ಕುಂಕುಮ ಕಂಡರೆ ಆಗುವುದಿಲ್ಲ. ಆದರೆ ದರ್ಗಾಕ್ಕೆ ಹೋಗುತ್ತಾರೆ. ನೂರು ರಾಮ ಮಂದಿರ ಅಭಿವೃದ್ಧಿ ಮಾಡ್ತೇವೆ ಅಂತ ಹೇಳಿದ್ದರು ಬಜೆಟ್‌ನಲ್ಲಿ ಅನುದಾನ ನೀಡಲಿಲ್ಲ. ಮುಸ್ಲಿಮರಿಗೆ ಅನೇಕ ರೀತಿಯ ಅನುದಾನ ನೀಡಿದ್ದಾರೆ. ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಆನಂದ ತಡೆದುಕೊಳ್ಳಲು ಕಾಂಗ್ರೆಸ್ ನವರಿಗೆ ಆಗುತ್ತಿಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತದೆ ಎಂದರು.
ಸುಪ್ರೀಂ ಕೋರ್ಟ್ 63 ಎಕರೆ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡಿ ಅಂತ ಹೇಳಿದೆ. ಇಂತಲ್ಲಿಯೇ ಗುದ್ದಲಿ ಇಟ್ಟು ನಿರ್ಮಾಣ ಮಾಡಿ ಅಂತ ಹೇಳಿಲ್ಲ. ರಾಮನ ಬಗ್ಗೆ ಏನಾದರೂ ಮಾತನಾಡಿದರೆ ರಾಮನ ಶಾಪ ತಟ್ಟುತ್ತೆ ಎಂದು ಕಿಡಿ ಎಂದಿದ್ದಾರೆ.