ಉಡುಪಿ: ವಿದ್ಯಾರ್ಥಿನಿಯರಿಬ್ಬರಿಗೆ ಸಮಾಜ ಸೇವಕರಿಂದ ಸಹಾಯಹಸ್ತ
ಉಡುಪಿ ಫೆ.19: ತಂದೆಯನ್ನು ಕಳೆದುಕೊಂಡ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಕಲಿಕೆಗೆ ತಲಾ ರೂ. 15000 ದಂತೆ, ರೂ.30000 ವಿಶು ಶೆಟ್ಟಿಯವರ ಮುಖಾಂತರ ನೀಡಲಾಯಿತು.
ವಿಶು ಶೆಟ್ಟಿಯವರ ಅಭಿಮಾನಿ ವೈದ್ಯರೋರ್ವರು ರೂ.10,000, ಹಾಗೂ ನಿವೃತ್ತ ವಿಜಯ ಬ್ಯಾಂಕ್ ಮ್ಯಾನೇಜರ್ ಅಂಬಲಪಾಡಿ ಸದಾನಂದ ಶೆಟ್ಟಿಯವರು ರೂ.10000 ಹಾಗೂ ವಿಶು ಶೆಟ್ಟಿ ರೂ.10000 ನೀಡಿ ಸಹಕರಿಸಿದ್ದಾರೆ.
ಈ ಹಿಂದೆ ತೀರಾ ಅಸಹಾಯಕರಾಗಿ ಇಬ್ಬರೂ ವಿದ್ಯಾರ್ಥಿನಿಯರನ್ನು ತಾಯಿಯೊಂದಿಗೆ ವಿಶು ಶೆಟ್ಟಿ ಮಹಿಳಾ ಪರ ಇಲಾಖೆಗೆ ಕರೆತಂದು ಅಲ್ಲಿನ ಸಿಬ್ಬಂದಿಗಳ ಮುಖಾಂತರ ಸಮಾಲೋಚನೆ ಹಾಗೂ ಧೈರ್ಯ ತುಂಬುವ ಮುಖಾಂತರ ವಿದ್ಯೆ ಮುಂದುವರಿಸುವಂತೆ ವಿಶು ಶೆಟ್ಟಿ ಪ್ರಯತ್ನಿಸಿದ್ದರು.
ಈಗಲೂ ಈ ಇಬ್ಬರು ವಿದ್ಯಾರ್ಥಿನಿಯರು ಮಹಿಳಾ ಪರ ಇಲಾಖೆಯ ಮಾರ್ಗದರ್ಶನ ಪಡೆಯುತ್ತಿದ್ದು ವಿದ್ಯೆ ಮುಂದುವರಿಸುತ್ತಿದ್ದಾರೆ.