ಅರ್ಥ ಪೂರ್ಣ ಹಾಗೂ ಜನ ಮೆಚ್ಚುವ ಉತ್ತಮ ಬಜೆಟ್- ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ: ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಅರ್ಥಪೂರ್ಣ ಹಾಗೂ ರಾಜ್ಯದ ಎಲ್ಲಾ ಜನಸಾಮಾನ್ಯರು ಮೆಚ್ಚುವಂತ ಒಂದು ಉತ್ತಮ ಬಜೆಟ್ ಆಗಿದೆ.
ಎಲ್ಲಾ ವರ್ಗದವರು ಒಪ್ಪು ಅಂತಹ ಉತ್ತಮ ಬಜೆಟ್ ಇದಾಗಿದೆ. ರಾಜ್ಯದ ಜನರಿಗೆ ನೀಡುತ್ತಿರುವ ಗ್ಯಾರೆಂಟಿಗಳಿಂದ ನಮ್ಮ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಸುಳ್ಳು ಹೇಳಿಕೆ ನೀಡಿ ಜನರನ್ನು ಓಲೈಸುತ್ತಿರುವ ಬಿಜೆಪಿ ನಾಯಕರು ಈ ಬಜೆಟನ್ನು ಕಂಡು ಕಂಗಾಲಾಗಿ ವಿಧಾನಸಭೆಯಿಂದಲೇ ಓಡಿ ಹೋಗಿರುತ್ತಾರೆ.
ಕೇಂದ್ರದ ಬಿಜೆಪಿ ಸರಕಾರ ಜನಸಾಮಾನ್ಯರಿಗೆ ನೀಡುತ್ತಿರುವುದು ಬೆಲೆ ಏರಿಕೆ ಅಂತಹ ಬಜೆಟ್ ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದ ಜನಸಾಮಾನ್ಯರಿಗೆ ಒಳಿತಾಗುವಂತ ಉತ್ತಮ ಬಜೆಟ್ ಅನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಂಡಿಸಿರುತ್ತಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಎಲ್ಲಾ ಉಚಿತ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವವರೆಗೆ ನಿರಂತರವಾಗಿ ಜನಸಾಮಾನ್ಯರ ಮನೆ ಮನೆಗೆ ತಲುಪಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು 15ನೇ ದಾಖಲೆ ಬಜೆಟ್ ಮಂಡಿಸಿ ರಾಜ್ಯದ ಜನತೆಗೆ ಕೊಡುಗೆಯನ್ನು ನೀಡಿರುತ್ತಾರೆ ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ರಾಜ್ಯದ ಮುಖ್ಯಮಂತ್ರಿಗಳಿಗೆ ಅಭಿನಂದನೆಯನ್ನು ತಿಳಿಸಿರುತ್ತಾರೆ.