ಬೈಂದೂರು: ಓಮಿನಿ ಕಾರನ್ನು ಬೆನ್ನಟ್ಟಿದ ಸರ್ಕಲ್ ಜೀಪ್ ಪಲ್ಟಿ, ಇಬ್ಬರಿಗೆ ಗಾಯ
ಬೈಂದೂರು: (ಉಡುಪಿ ಟೈಮ್ಸ್ ವರದಿ) ರಾಷ್ಟ್ರೀಯ ಹೆದ್ದಾರಿಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಓಮಿನಿ ಕಾರೊಂದನ್ನು ಬೆನ್ನಟ್ಟಿ ಹೋದ ಬೈಂದೂರು ವೃತ್ತ ನಿರೀಕ್ಷಕರ ಜೀಪು ಪಲ್ಟಿಯಾಗಿರುವ ಘಟನೆ ಗುರುವಾರ ತಡ ರಾತ್ರಿ ನಡೆದಿದೆ.
ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಒಂದು ಗಂಟೆ ಸುಮಾರಿಗೆ ನೈಟ್ ಬಿಟ್‌ನಲ್ಲಿರುವಾಗ ಓಮಿನಿ ಕಾರೊಂದು ವೃತ್ತ ನಿರೀಕ್ಷಕ ಸುರೇಶ್ ಕುಮಾರ್ ಜೀಪನ್ನು ಕಂಡು ವೇಗವಾಗಿ ಹೋಗುತ್ತಿದ್ದನ್ನು ಕಂಡು ಬೆನ್ನಟ್ಟಿದಾಗ ಪೊಲೀಸ್ ಜೀಪು ಚಾಲಕನ ನಿಯಂತ್ರಣ ತಪ್ಪಿ ರಾಘವೇಂದ್ರ ಮಠದ ಬಳಿ ಜೀಪು ಪಲ್ಟಿಯಾಗಿದೆ ಎನ್ನಲಾಗಿದೆ.
ಈ ಅಪಘಾತದಲ್ಲಿ ವೃತ್ತ ನಿರೀಕ್ಷಕ ಸುರೇಶ ನಾಯ್ಕ್ ಮತ್ತು ಚಾಲಕ ಹೇಮ್‌ರಾಜ್ ಗಾಯಗೊಂಡಿದ್ದಾರೆ. ಅವರು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಬೈಂದೂರು ಎಸೈ ತಿಳಿಸಿದ್ದಾರೆ,
God bless them, they tried their level best. Unfortunately Omni car escaped.