ಶ್ರೀಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನದ ಲೋಕಾರ್ಪಣೆ: ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ
ಕಜ್ಕೆ: ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಕಜ್ಕೆ ಶಾಖಾ ಮಠದ ಶ್ರೀಅನ್ನಪೂರ್ಣೇಶ್ವರಿ, ಶ್ರೀ ಗಣಪತಿ ಮತ್ತು ಶ್ರೀಆದಿ ಶಂಕರಾಚಾರ್ಯರ ಶಿಲಾಮಯ ದೇವಸ್ಥಾನದ ಲೋಕಾರ್ಪಣೆ, ಶಿಲಾ ಬಿಂಬ ಪ್ರತಿಷ್ಠೆ ಮತ್ತು ಮಹಾ ಕುಂಭಾಭಿಷೇಕವು ಇದೇ 21ರಂದು ನಡೆಯಲಿದ್ದು ಮಹಾಕಾರ್ಯದ ವಿವಿಧ ಧಾರ್ಮಿಕ ವಿಧಿವಿಧಾನಗಳು ಮಂಗಳವಾರ ಆರಂಭಗೊಂಡಿತು.
ಪರಮಪೂಜ್ಯ ಶ್ರೀಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ, ತಂತ್ರಿಯವರು, ವೈಧಿಕರ ವಿದ್ಯುಕ್ತ ಸ್ವಾಗತ, ಶಿಲ್ಪ ಪೂಜೆ, ಶಿಲ್ಪ ಗೌರವ, ಆಲಯ ಪರಿಗ್ರಹ, ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಧ್ವಜಾರೋಹಣ ಸಹಿತ ಧಾರ್ಮಿಕ ಕಾರ್ಯಗಳು ನಡೆಯಿತು. ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನದ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಹೆಬ್ರಿ ಮಠದಬೆಟ್ಟು ರಾಜೇಶ ಆಚಾರ್ಯ ಲೀಲಾವತಿ ಆಚಾರ್ಯ ದಂಪತಿಗಳು ಪೂಜೆ ನೇರವೇರಿಸಿದರು.
ತಂತ್ರತಿಗಳಾದ ವೇದಮೂರ್ತಿ ಉದ್ಯಾವರ ವಿಶ್ವನಾಥ ಪುರೋಹಿತ್, ವೇದಮೂರ್ತಿ ಕೇಶವ ಪುರೋಹಿತ್ ಮೂಡಬಿದರೆ ನೇತ್ರತ್ವದಲ್ಲಿ ನಾರಾಯಣ ಆಚಾರ್ಯ ಪೂರೋಹಿತ್, ವಿದ್ವಾನ್ ಚಂದ್ರಕಾಂತ್ ಶರ್ಮಾ ಹೆಬ್ರಿ, ರವೀಂದ್ರ ಪುರೋಹಿತ್ ಹೆಬ್ರಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು. ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನ ಸಮಿತಿಯ ಗೌರವ ಪ್ರಧಾನ ಮಾರ್ಗದರ್ಶಕ ಕರುಣಾಕರ ಶೆಟ್ಟಿ ಕಜ್ಕೆ, ಸ್ವಾಗತ ಸಮಿತಿಯ ಅಧ್ಯಕ್ಷ ಕಜ್ಕೆ ಕಾಶಿನಾಥ ಶೆಣೈ, ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನ ನಿರ್ಮಾಣ ಸಮಿತಿ ಮತ್ತು ಮಹಾ ಕುಂಭಾಭಿಷೇಕ ಸಮಿತಿ, ವಿವಿಧ ಉಪಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಗಣ್ಯರು, ಭಕ್ತಾಧಿಗಳು ಭಾಗಿಯಾದರು.