ಶ್ರೀರಾಮ್ ಫೈನಾನ್ಸ್ ಲಿ. ಸಂಸ್ಥೆ ಎತ್ತರಕ್ಕೆ ಬೆಳೆದಷ್ಟು ವಿಧ್ಯಾರ್ಥಿಗಳ ಭವಿಷ್ಯ ಹೆಚ್ಚು ಉಜ್ವಲವಾಗುತ್ತದೆ: ಸುಧೀರ್ ಕುಮಾರ್
ಕೊಪ್ಪ: ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಸಂಸ್ಥೆ ವತಿಯಿಂದ ಕೊಪ್ಪ ಲಯನ್ಸ್ ಸೇವಾ ಮಂದಿರ ಇಲ್ಲಿ ನಡೆದ ವಿಧ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಖ್ಯಾತ ವಕೀಲರೂ, ಕೆಪಿಸಿಸಿ ವಕ್ತಾರರೂ ಆಗಿರುವ ಸುಧೀರ್ ಕುಮಾರ್ ಮುರೊಳ್ಳಿಯವರು ಮಾತಾಡಿ ಧರ್ಮ ಎಂದರೆ ಪರರಿಗೆ ನೀಡುವ ಗೌರವ, ಮಾನವೀಯತೆಗೆ ನೀಡುವ ಗೌರವ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನೀಡುವ ಗೌರವವೇ ಹೊರತು ಇನ್ನೊಬ್ಬ ವ್ಯಕ್ತಿಯ ಕೆಡಕು ಬಯಸಿ ಅವರವರು ವೈಯಕ್ತಿಕವಾಗಿ ಪಾಲಿಸುವ ಧರ್ಮ ಜಾತಿಯನ್ನು ಟೀಕಿಸಿ, ಅದನ್ನು ದ್ವೇಷಿಸಿ ಬಾಳುವುದು ಯಾವ ಧರ್ಮದಲ್ಲಿ ಕೂಡ ಉಲ್ಲೇಖಿಸಿಲ್ಲ ಮತ್ತು ಅದು ಧರ್ಮವೂ ಅಲ್ಲ ಮತ್ತು ಮಕ್ಕಳ ಭವಿಷ್ಯದಲ್ಲಿ ಕೆಟ್ಟ ಭಾವನೆ ತುಂಬಲು ಪ್ರಯತ್ನ ಮಾಡುವ ಯಾವ ವ್ಯಕ್ತಿಯೂ ಸಮಾಜದ ಒಳಿತನ್ನು ಬಯಸಲಾರ ಎಂದು ತಮ್ಮ ಅಭಿಪ್ರಾಯಪಟ್ಟರು.
ಹಾಗಾಗಿ ಇಂದಿನ ವಿದ್ಯಾರ್ಥಿಗಳು ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ನಂತ ಹಣಕಾಸು ಸಂಸ್ಥೆಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ತಮ್ಮ ವಿಧ್ಯಾಭ್ಯಾಸಕ್ಕೆ ನೀಡುವ ಉತ್ತಮ ಮಟ್ಟದ ವಿದ್ಯಾರ್ಥಿವೇತನವನ್ನು ಪಡೆದು ದೇಶದ ಉತ್ತಮ ನಾಗರಿಕರಾಗಿ ಬದುಕಬೇಕು ಅದೇ ರೀತಿ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ನಂತಹ ಸಂಸ್ಥೆಗಳು ಮತ್ತಷ್ಟು ತಮ್ಮ ವ್ಯವಹಾರ ವೃದ್ಧಿಸಿಕೊಂಡು ವಿಧ್ಯಾಭ್ಯಾಸ ಮಾಡುವ ಮತ್ತಷ್ಟು ವಿಧ್ಯಾರ್ಥಿಗಳ ಭವಿಷ್ಯ ರೂಪಿಸಲಿ ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಕೊಪ್ಪ ಶಿಕ್ಷಣ ಅಧಿಕಾರಿ ಆಂಜನಪ್ಪ, ಕೊಪ್ಪ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಸವರಾಜ್, ಕೊಪ್ಪ ಆಟೋ ಮಾಲಕರ ಸಂಘದ ಅಧ್ಯಕ್ಷರಾದ ಜಗದೀಶ್ ನುಗ್ಗೆ, ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಶ್ರಾವಣ ಕುಮಾರ್ ಜಾಧವ್, ಸಂತೃಪ್ತ, ಪ್ರಭಾಕರ ಉಪಸ್ಥಿತರಿದ್ದರು.