ಬೈಂದೂರು: ಹಾಲು ಕುಡಿಸಿ ಮಲಗಿದ್ದ ಹಸುಗೂಸು ಮೃತ್ಯು
ಬೈಂದೂರು, ಫೆ.13: ಒಂದೂವರೆ ತಿಂಗಳ ಹಸುಗೂಸು ಮಲಗಿದ್ದಲ್ಲಿಯೇ ಮೃತಪಟ್ಟ ಘಟನೆ ಶಿರೂರು ಗ್ರಾಮದ ಬಿಲ್ಲುಕೇರಿ ಆಲಂದೂರು ಎಂಬಲ್ಲಿ ಫೆ.12ರಂದು ಬೆಳಗ್ಗೆ ನಡೆದಿದೆ.
ಆಲಂದೂರು ನಿವಾಸಿ ಅನಿತಾ ಎಂಬವರು ಮಗ ಸಂಕೇತ ಮೃತ ದುವೈರ್ವಿ. ಅನಿತಾ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದು, ಮಗು ಆರೋಗ್ಯವಾಗಿತ್ತು ಎನ್ನಲಾಗಿದೆ. ಮನೆಯಲ್ಲಿ ಮಗುವಿಗೆ ಎದೆಹಾಲು ಕುಡಿಸಿ ತೇಗಿಸಿ ಮಲಗಿಸಿದ್ದು, ಬಳಿಕ ಮಗುವಿನ ಮೈ ತಣ್ಣಗಾಗಿ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿರಲಿಲ್ಲ. ಕೂಡಲೇ ಮಗುವನ್ನು ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವು ದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.