ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ಪರ್ಸ್, ಮೊಬೈಲ್ ಸಹಿತ ಸ್ಕೂಟರ್ ಕಳವು!
ಕಾಪು ಫೆ.13 (ಉಡುಪಿ ಟೈಮ್ಸ್ ವರದಿ): ರಸ್ತೆ ಬದಿ ದ್ವಿಚಕ್ರ ವಾಹನ ನಿಲ್ಲಿಸಿ ಮಲಗಿದ್ದ ವ್ಯಕ್ತಿಯ ಪರ್ಸ್, ಮೊಬೈಲ್ ಸಹಿತ ಸ್ಕೂಟರ್ನ್ನು ಕಳವು ಮಾಡಿರು ಘಟನೆ ಕೊಪ್ಪಲಂಗಡಿ ದರ್ಗಾದ ಬಳಿ ನಡೆದಿದೆ.
ಫೆ.11 ರಂದು ಕಾರ್ಕಳದ ಮುಡಾರು ಗ್ರಾಮದ ಚೇತನ್ ಅವರು ರಾತ್ರಿ ಸುರತ್ಕಲ್ಗೆ ಹೋಗುವ ಸಲುವಾಗಿ ತಮ್ಮ ಸ್ಕೂಟರ್ನಲ್ಲಿ ರಾಹೆ 66ರಲ್ಲಿ ಹೋಗುತ್ತಿದ್ದರು. ಸರಿ ರಾತ್ರಿ 12:00 ಗಂಟೆ ಸಮಯಕ್ಕೆ ಕೊಪ್ಪಲಂಗಡಿ ದರ್ಗಾದ ಬಳಿ ತಲುಪುತ್ತಿದ್ದಂತೆ ಸ್ಕೂಟರ್ ಸವಾರಿ ಮಾಡಲು ಕಷ್ಟವಾಗಿದ್ದುದರಿಂದ ತನ್ನ ಸ್ಕೂಟರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಸ್ಕೂಟರಿನಲ್ಲಿ ತಲೆ ಇಟ್ಟು ಮಲಗಿದ್ದರು. ಆದರೆ ಮರುದಿನ ಬೆಳಿಗ್ಗಿನ ಜಾವ 2:30ಕ್ಕೆ ಎಚ್ಚರವಾಗಿ ನೋಡಿದಾಗ ಹೆಲ್ಮೆಟ್ ಸಮೇತ ರಸ್ತೆ ಬದಿ ಮಲಗಿದ್ದು ಅವರ ಸ್ಕೂಟರ್, ಮೊಬೈಲ್, ಪರ್ಸ್ ಕಳವಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.