ಕಾರ್ಕಳ: ಸಮಾರಂಭದಲ್ಲಿಯೇ ಕುಸಿದು ಬಿದ್ದು ಛಾಯಾಗ್ರಾಹಕ ಮೃತ್ಯು
ಕಾರ್ಕಳ: ಸಮಾರಂಭವೊಂದರಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವಿಡಿಯೋಗ್ರಾಫರ್ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಛಾಯಾಗ್ರಾಹಕ ಭೀಮಗುತ್ತು ದೀಪಕ್ ಶೆಟ್ಟಿ(44) ಸೋಮವಾರ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗಲೇ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.