‘ಗೂಗಲ್ ಪೇ, ಫೋನ್ ಪೇ-ಎರಡುʼ ಟಿಕ್ಕಿಂಗ್ ಟೈಮ್ ಬಾಂಬ್ಗಳು: ಸಂಸದೆ ಸುಪ್ರಿಯಾ ಸುಳೆ
ಹೊಸದಿಲ್ಲಿ: ಜನಪ್ರಿಯ ಡಿಜಿಟಲ್ ಪೇಮೆಂಟ್ ಪ್ಲ್ಯಾಟ್ಫಾರ್ಮ್ಗಳ ಕುರಿತು ಇರುವ ಆತಂಕಗಳ ಕುರಿತಂತೆ ಶುಕ್ರವಾರ ಲೋಕಸಭೆಯಲ್ಲಿ ಮಾತನಾಡಿದ ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ, ಗೂಗಲ್ ಪೇ ಮತ್ತು ಫೋನ್ ಪೇ ಅನ್ನು “ಎರಡು ಟಿಕ್ಕಿಂಗ್ ಟೈಮ್ ಬಾಂಬ್ಗಳು”: ಎಂದು ಬಣ್ಣಿಸಿದ್ಧಾರೆ. ಈ ಪೇಮೆಂಟ್ ಆ್ಯಪ್ ಗಳ ಮೂಲಕ ಸಂಭಾವ್ಯ ಅಕ್ರಮ ಹಣ ವರ್ಗಾವಣೆಗಳನ್ನು ತಡೆಯಲು ಸರ್ಕಾರ ಕ್ರಮಕೈಗೊಳ್ಳಬೇಕೆಂದೂ ಅವರು ಆಗ್ರಹಿಸಿದರು.
“ಭಾರತದ ಆರ್ಥಿಕತೆಯ ಕುರಿತ ಶ್ವೇತಪತ್ರ” ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಸುಪ್ರಿಯಾ ಸುಳೆ ಮಾತನಾಡುತ್ತಿದ್ದರು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸುತ್ತ ಹರಡಿಕೊಂಡಿರುವ ವಿವಾದಗಳು ಡಿಜಿಟಲ್ ವ್ಯವಹಾರ ಸಂಬಂಧಿ ಅಪಾಯಗಳನ್ನು ಎತ್ತಿ ತೋರಿಸಿದೆ ಎಂದು ಅವರು ಹೇಳಿದರು.
ಸರ್ಕಾರದ ಭೀಮ್ ಆ್ಯಪ್ ಬಳಸುವವರ ಸಂಖ್ಯೆಯು ಗೂಗಲ್ ಪೇ ಮತ್ತು ಫೋನ್ಪೇ ಬಳಕೆದಾರರ ಸಂಖ್ಯೆಗಿಂತಲೂ ಕಡಿಮೆ ಇರುವುದನ್ನು ಅವರು ನೆನಪಿಸಿದರಲ್ಲದೆ ಡಿಜಿಟಲ್ ಆರ್ಥಿಕತೆಯ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವಂತೆ ಅವರು ಸರ್ಕಾರವನ್ನು ಕೇಳಿಕೊಂಡರು.