ತೆಂಕನಿಡಿಯೂರು: ಅನಧಿಕೃತ ಕೋಳಿ ಅಂಗಡಿಗೆ ಬೀಗ
ಉಡುಪಿ, ಫೆ.10: ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದಲಿತರ ಮೀಸಲು ಕ್ಷೇತ್ರವಾಗಿರುವ ಶ್ರೀನಗರದಲ್ಲಿ ಅನಧಿಕೃತವಾಗಿ ನಡೆಸು ತ್ತಿದ್ದರೆನ್ನಲಾದ ಚಿಕನ್ ಸ್ಟಾಲ್ಗೆ ಶುಕ್ರವಾರ ಗ್ರಾಪಂನಿಂದ ಬೀಗ ಜಡಿಯಲಾಗಿದೆ.
ಗ್ರಾಮ ಪಂಚಾಯತ್ ಮತ್ತು ನಗರ ಹಾಗೂ ಗ್ರಾಮಾಂತರ ಇಲಾಖೆಯಿಂದ ಪರವಾನಿಗೆ ಪಡೆಯದೆ ಗ್ರಾಪಂ ಸದಸ್ಯೆ ಪುಷ್ಪ ಈ ಕಟ್ಟಡ ನಿರ್ಮಿಸಿದ್ದು, ತೆಂಕನಿಡಿಯೂರು ಗ್ರಾಪಂನಿಂದ ಉದ್ಯಮ ಪರವಾನಿಗೆ ಪಡೆಯದೆ ಚಿಕನ್ ಸ್ಟಾಲ್ನ್ನು ಆರಂಭಿಸಿದ್ದರು ಎಂದು ದೂರಲಾಗಿತ್ತು. ಈ ಹಿನ್ನೆಲೆಯಲ್ಲಿ ಉಡುಪಿ ತಾಪಂ ಕಾರ್ಯನಿರ್ವಹ ಣಾಧಿಕಾರಿ ಆದೇಶದಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಈ ಅನಧಿಕೃತ ಕೋಳಿ ಅಂಗಡಿಗೆ ಬೀಗ ಜಡಿದು ಸೀಲ್ ಮಾಡಿದರು.
ಪರಿಸರದಲ್ಲಿ ದುರ್ವಾಸನೆ ಬೀರುವ ಈ ಅನಧಿಕೃತ ಚಿಕನ್ ಸ್ಟಾಲ್ನ್ನು ತೆರವುಗೊಳಿಸುವಂತೆ ಜ.20ರಂದು ತೆಂಕನಿಡಿಯೂರು ಗ್ರಾಪಂ ಕಛೇರಿ ಎದುರು ಜಿಲ್ಲಾ ಅಂಬೇಡ್ಕರ್ ಯುವಸೇನೆ ಧರಣಿ ನಡೆಸಿತು. ಅಲ್ಲದೆ ಇತ್ತೀಚೆಗೆ ಉಡುಪಿಗೆ ಆಗಮಿಸಿದ ಉಪಲೋಕಾಯುಕ್ತರಿಗೆ ಅನಧಿಕೃತ ಕೋಳಿ ಅಂಗಡಿಯ ವಿರುದ್ಧ ಕ್ರಮ ಜರಗಿಸದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಅಂಬೇಡ್ಕರ್ ಯುವಸೇನೆ ದೂರು ನೀಡಿತ್ತು.
‘ಕರ್ನಾಟಕ ಪಂಚಾಯತ್ರಾಜ್ ಅಧಿನಿಯಮ 67, 68, 69 ಪ್ರಕಾರ ಕಾನೂನು ಉಲ್ಲಂಘನೆ ಮಾಡಿರುವುದರ ವಿರುದ್ಧ ಪೊಲೀಸ್ ಬಂದೋಬಸ್ತಿನಲ್ಲಿ ತೆಂಕನಿಡಿಯೂರು ಗ್ರಾಪಂ ಪಿ.ಡಿ.ಒ ಈ ಅನಧಿಕೃತ ಕೋಳಿ ಅಂಗಡಿಗೆ ಬೀಗ ಜಡಿದಿರುವುದು ಅಂಬೇಡ್ಕರ್ ಯುವಸೇನೆುಂ ಹೋರಾಟಕ್ಕೆ ಸಂದ ಗೆಲುವು ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ತಿಳಿಸಿದ್ದಾರೆ.