ಉಡುಪಿ: ಅಕ್ರಮ ಮದ್ಯ, ಗಾಂಜಾ ವಶ, ನಾಲ್ವರ ಬಂಧನ
ಉಡುಪಿ, ಅ.15 : ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯು ಅಕ್ಟೋಬರ್ 1 ರಿಂದ 14ರವರೆಗೆ 429 ಗ್ರಾಂ ಗಾಂಜಾ, 29.520 ಲೀ. ಅಕ್ರಮ ಮದ್ಯ, 19.500 ಲೀಟರ್ ಗೋವಾ ಮದ್ಯ ಹಾಗೂ 5 ದ್ವಿಚಕ್ರ ವಾಹನಗಳನ್ನು ಮತ್ತು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ವಶಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 3 ಲಕ್ಷ ರೂ.ಗಳಾಗಿರುತ್ತದೆ ಎಂದು ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತರ ಪ್ರಕಟಣೆ ತಿಳಿಸಿದೆ.