ಉಡುಪಿ: ಡಿಸಿ ಕಚೇರಿ ಬಳಿ ಹನುಮಾನ್ ಚಾಲೀಸಾ ಪಠಿಸಿ ಪ್ರತಿಭಟನೆ!
ಉಡುಪಿ: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಮಾಡಿದ ಹಿಂದೂ ವಿರೋಧಿ ಕ್ರಮವನ್ನು ಖಂಡಿಸಿ, ಧ್ವಜ ಮರುಸ್ಥಾಪನೆಗೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗದಳ ಜಿಲ್ಲಾ ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿಯ ಸತ್ಯಾಗ್ರಹ ಕಟ್ಟೆಯಲ್ಲಿ ಹೆಗಲು, ತಲೆಗೆ ಕೇಸರಿ ಸುತ್ತಿದ್ದ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಿಸಿ ಕೊನೆಗೆ ಭಾರತ ಮಾತೆ, ಹನುಮ, ಶ್ರೀರಾಮಚಂದ್ರನಿಗೆ ಜೈಕಾರ ಕೂಗಿದರು.
ಎಡಿಸಿ ಮಮತಾ ದೇವಿ ಬಿ. ಎಸ್. ಮನವಿ ಸ್ವೀಕರಿಸಿದರು. ಬಜರಂಗದಳ ಕರ್ನಾಟಕ ಪ್ರಾಂತ ಸಂಚಾಲಕ ಸುನಿಲ್ ಕೆ. ಆರ್., ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ನಗರ ಮಾತೃ ಶಕ್ತಿ ಪ್ರಮುಖ್ ಗೀತಾ ರವಿ ಶೇಟ್, ವಿಹಿಂಪ ಬೈಂದೂರು ತಾಲೂಕು ಅಧ್ಯಕ್ಷ ಜಗದೀಶ್ ಕೊಲ್ಲೂರು, ವಿಹಿಂಪ ಜಿಲ್ಲಾ ಸಹ ಕಾರ್ಯದರ್ಶಿ ಸುರೇಂದ್ರ ಕೋಟೇಶ್ವರ, ಬಜರಂಗ ದಳ ಜಿಲ್ಲಾ ಸಂಯೋಜಕ ಚೇತನ್ ಪೇರಲ್ಕೆ, ಬಜರಂಗದಳ ಜಿಲ್ಲಾ ಸಹ ಸಂಯೋಜಕ ಮನೋಜ್ ಮಲ್ಪೆ, ವಿಹಿಂಪ ಗ್ರಾಮಾಂತರ ಅಧ್ಯಕ್ಷ ಸುಧೀರ್ ಹಿರೇಬೆಟ್ಟು ಉಪಸ್ಥಿತರಿದ್ದರು.