ಇಂದ್ರಾಳಿ: ಅ.18ರಂದು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಅತಿಥಿಗೃಹ ಉದ್ಘಾಟನೆ
ಉಡುಪಿ: ಸುಮಾರು 1000 ವರ್ಷಗಳ ಪೌರಾಣಿಕ ಇತಿಹಾಸದ ಹಿನ್ನಳೆಯುಳ್ಳ ಇಂದ್ರಾಣಿ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಇಂದ್ರಾಳಿಯಲ್ಲಿ ಭಕ್ತಜನರ ಅನುಕೂಲಕ್ಕಾಗಿ ದಾನಿಗಳ ಸಹಯೋಗದೊಂದಿಗೆ ನೂತನವಾಗಿ ನಿರ್ಮಾಣವಾದ ಇಂದ್ರಾಣಿ ಅತಿಥಿಗೃಹದ ಉದ್ಘಾಟನಾ ಸಮಾರಂಭವು ನವರಾತ್ರಿ ಮಹೋತ್ಸವದ ಅ.18 ಬೆಳಿಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಮುಜರಾಯಿ, ಧಾರ್ಮಿಕ ದತ್ತಿ ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರ ಸಭಾ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಲಿರುವರು ಎಂದು ಇಂದ್ರಾಳಿ ಶ್ರೀಪಂಚದುರ್ಗಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.