ಫೆ.10: “ಲೊಂಬಾರ್ಡೊ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ & ಅಲೈಂಡ್ ಹೆಲ್ತ್ ಸೈಯನ್ಸ್” ಉದ್ಘಾಟನೆ
ಉಡುಪಿ ಫೆ.9(ಉಡುಪಿ ಟೈಮ್ಸ್ ವರದಿ): ಉಡುಪಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಲೋಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆಯ ನೂತನ “ಲೊಂಬಾರ್ಡೊ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಆ್ಯಂಡ್ ಅಲೈಂಡ್ ಹೆಲ್ತ್ ಸೈಯನ್ಸ್” ಫೆ.10 ರಂದು ಸಂಜೆ 4 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ನೂತನ ಸಂಸ್ಥೆಯನ್ನು ರೆ.ಫಾ.ಹೇಮಚಂದ್ರ ಕುಮಾರ್ ಬಿಷಪ್ ಅವರು ಉದ್ಘಾಟಿಸಲಿದ್ದಾರೆ.ಲೊಂಬಾರ್ಡೋ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಡಾ.ಸುನಿಲ್ ಜತ್ತನ್ನ ಅವರು ಸಮಾರಂಬದ ಅಧ್ಯಕ್ಷತೆ ವಹಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಮಾರಂಭದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಸರ್ಜನ್ ಡಾ.ವೀಣಾ ಕುಮಾರಿ ಎಂ, ಕಿನ್ನಿಮುಲ್ಕಿ ವಾರ್ಡ್ನ ಕೌನ್ಸಿಲರ್ ಅಮೃತಾ ಕೃಷ್ಣಮೂರ್ತಿ, ಬಿಗ್ ಜೆ ಮಿಡಿಯಾದ ನಿರ್ದೇಶಕ ಪ್ರಶಾಂತ್ ಜತ್ತನ್ನ, ಉಡುಪಿ ಮದರ್ ಆಫ್ ಸಾರೋಸ್ ಚರ್ಚ್ನ ಧರ್ಮಗುರು ರೆ. ಫಾ.ಚಾಲ್ರ್ಸ್ ಮೆನೇಜಸ್, ಕಾಪುವಿನ ಜಮಿಯ್ಯತುಲ್ ಫಲ್ಹಾದ ಅಧ್ಯಕ್ಷ ಶಾಬಿಹ ಅಹಮದ್ ಕಾಝಿ ಅವರು ಉಪಸ್ಥಿತರಿರಲಿದ್ದಾರೆ.