ಕಾರ್ಕಳ: ವೈನ್ ಶಾಪ್ ನಲ್ಲಿ ಅಗ್ನಿ ಅವಘಡ
ಕಾರ್ಕಳ, ಫೆ 07: ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಡುರಸ್ತೆ ಬಳಿ ಖಾಸಗಿ ವೈನ್ ಶಾಪ್ನಲ್ಲಿ ಬೆಳಗ್ಗೆ ಅಗ್ನಿ ಅನಾಹುತ ಸಂಭವಿಸಿದೆ.
ಮಾಹಿತಿ ಪಡೆದ ಅಗ್ನಿ ಶಾಮಕ ದಳವು ಘಟನಾ ಸ್ಥಳಕ್ಕೆ ಅಗಮಿಸಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದರು.
ಕಾರ್ಯಚರಣೆ ಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬಿ ಎಮ್ ಸಂಜೀವ್ ಸಿಬ್ಬಂದಿ ಗಳು ಚಂದ್ರ ಶೇಖರ, ರೂಪೇಶ, ಹರಿಪ್ರಸಾದ್ ಶೆಟ್ಟಿಗಾರ, ನಿತ್ಯಾನಂದ , ರಫಿಕ್, ರವಿಚಂದ್ರ ಪಾಲ್ಗೊಂಡಿದ್ದರು