ಟಿಆರ್ ಪಿ ಹಗರಣ: ಸುದ್ದಿ ವಾಹಿನಿಗಳ ವಾರದ ರೇಟಿಂಗ್ಸ್ ತಾತ್ಕಾಲಿಕ ಸ್ಥಗಿತ!

ಮುಂಬೈ: ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್ ಪಿ) ಹಗರಣ ಹಿನ್ನೆಲೆಯಲ್ಲಿ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (ಬಿಎಆರ್ ಸಿ) ದೇಶಾದ್ಯಂತ ಸುದ್ದಿ ವಾಹಿನಿಗಳ ವಾರದ ರೇಟಿಂಗ್ಸ್ ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

ಸುದ್ದಿವಾಹಿನಿಗಳ ರೇಟಿಂಗ್ ಗಳ ಸಂಖ್ಯಾಶಾಸ್ತ್ರೀಯ ದೃಢತೆ, ಪಾರದರ್ಶಕತೆಯನ್ನು ಸುಧಾರಿಸಲು ಪ್ರಸ್ತುತ ಅಳತೆಯ ಮಾನದಂಡಗಳನ್ನು ಪರಿಶೀಲಿಸಲು ಇನ್ನು 12 ವಾರಗಳವರೆಗೆ ಸಾಪ್ತಾಹಿಕ ರೇಟಿಂಗ್‌ ಗೆ ವಿರಾಮ ನೀಡುವುದಾಗಿ ರೇಟಿಂಗ್ಸ್ ಮಂಡಳಿ ತಿಳಿಸಿದೆ.

ಈ ತಿಂಗಳ ಆರಂಭದಲ್ಲಿ ಟಿಆರ್ ಪಿ ಹಗರಣ ಬೆಳಕಿಗೆ ಬಂದ ನಂತರ 5 ಮಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದವರಲ್ಲಿ ಸುದ್ದಿ ವಾಹಿನಿಗಳ ಉದ್ಯೋಗಿಗಳು ಸೇರಿದ್ದಾರೆ. ಪೊಲೀಸರು ಅರ್ನಬ್ ಗೋಸ್ವಾಮಿಯವರ ರಿಪಬ್ಲಿಕ್ ಟಿವಿ ಎಕ್ಸಿಕ್ಯೂಟಿವ್ ಗಳನ್ನು ಸಹ ವಿಚಾರಣೆ ನಡೆಸುತ್ತಿದ್ದಾರೆ. ತಮ್ಮ ಕಡೆಯಿಂದ ಯಾವುದೇ ಅಕ್ರಮ ನಡೆದಿಲ್ಲ ಎಂದು ರಿಪಬ್ಲಿಕ್ ಟಿವಿ ತಿಳಿಸಿದೆ.   

Leave a Reply

Your email address will not be published. Required fields are marked *

error: Content is protected !!