ಫೆ.15: ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಮುಚ್ಚಿದ ಎಲ್ಲಾ ನೆಲಮಾಳಿಗೆಗಳ ಎಎಸ್ಐ ಸಮೀಕ್ಷೆಯ ವಿಚಾರಣೆ
ವಾರಣಾಸಿ, ಫೆ 06: ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಮುಚ್ಚಿದ ಎಲ್ಲಾ ನೆಲಮಾಳಿಗೆಗಳ ಎಎಸ್ಐ ಸಮೀಕ್ಷೆಯನ್ನು ಕೋರುವ ಅರ್ಜಿಯ ವಿಚಾರಣೆಯನ್ನು ಫೆ.15 ರಂದು ವಾರಣಾಸಿ ನ್ಯಾಯಾಲಯವು ನಡೆಸಲಿದೆ.
ಉಳಿದ ತೆಹಖಾನಾಗಳನ್ನು ತೆರೆಯುವ ಕುರಿತು ಅರ್ಜಿದಾರರಾದ ರಾಖಿ ಸಿಂಗ್ ಅವರು ಸಲ್ಲಿಸಿರುವ ಮನವಿಯನ್ನು ಫೆಬ್ರವರಿ 15 ರಂದು ವಿಚಾರಣೆಗೆ ನಡೆಸಲಾಗುವುದು ಎಂದು ವರದಿಯಾಗಿದೆ.ಸಿಪಿಸಿಯ ಸೆಕ್ಷನ್ 75 (ಇ) ಮತ್ತು ಆರ್ಡರ್ 26 ನಿಯಮ 10ಎ ಆರ್/ಡಬ್ಲ್ಯೂ ಸೆಕ್ಷನ್ 151 ರ ಅಡಿಯಲ್ಲಿ ರಾಖಿ ಸಿಂಗ್ (ಅಡ್ವೊಕೇಟ್ ಸೌರಭ್ ತಿವಾರಿ ಮೂಲಕ) ಅರ್ಜಿಯನ್ನುಸಲ್ಲಿಸಿದ್ದಾರೆ.ಇನ್ನು ಜ್ಞಾನವಾಪಿ ಆಸ್ತಿಯ ಧಾರ್ಮಿಕ ಸ್ವರೂಪವನ್ನು ಖಚಿತಪಡಿಸಿ ಕೊಳ್ಳಲು ಉಳಿದ ನೆಲಮಾಳಿಗೆಗಳ ಸಮೀಕ್ಷೆ ಅಗತ್ಯ ಎಂದು ಸಿಂಗ್ ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ.