ಉಡುಪಿ: ಪ್ರಸಿದ್ಧ ನಾಟಿ ವೈದ್ಯ ನಿಟ್ಟೂರು ಶ್ರೀನಿವಾಸ ಪೂಜಾರಿ ನಿಧನ
ಉಡುಪಿ: ಪ್ರಸಿದ್ಧ ನಾಟಿ ವೈದ್ಯ ನಿಟ್ಟೂರು ಶ್ರೀನಿವಾಸ ಪೂಜಾರಿ (68) ಇಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಕಳೆದ ಕೆಲವು ಸಮಯಗಳಿಂದ ಅನಾರೊಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ಧೀಢೀರ್ ಅಸ್ವಸ್ಥರಾಗಿದ್ದು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ನಾಟಿ ಮದ್ದಿನ ಮೂಲಕ ಪ್ರಸಿದ್ದರಾಗಿದ್ದ ಶ್ರೀನಿವಾಸ ಪೂಜಾರಿಯವರ ಬಳಿ ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸಿ ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿದ್ದ ಅವರು ಹಲವು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.