ಶಿರ್ವ ಮುಖ್ಯ ರಸ್ತೆ ಅವ್ಯವಸ್ಥೆ ಸರಿಪಡಿಸಲು ಆಗ್ರಹ
ಶಿರ್ವ: ವಾರಾಹಿಯಿಂದ ಶಿರ್ವ ಗ್ರಾಮಕ್ಕೆ ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡುವ ಉದ್ದೇಶದಿಂದ ಶಿರ್ವ- ಕಟಪಾಡಿ ರಾಜ್ಯ ಹೆದ್ದಾರಿ ರಸ್ತೆ ಬದಿಯಲ್ಲಿ ಪೈಪ್ಲೈನ್ ನಡೆಸಿದ್ದು ಶಿರ್ವ ಪೇಟೆಯಲ್ಲಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಡಾಮರೀಕರಣವನ್ನು ಅಗೆದು ಪೈಪ್ಲೈನ್ ನಡೆಸಿದ್ದು ಅಗೆದ ರಸ್ತೆಯನ್ನು ಮಣ್ಣು ಹಾಕಿ ಮುಚ್ಚಿರುತ್ತಾರೆ. ಸದ್ರಿ ಮಣ್ಣು ಮುಚ್ಚಿದ ಭಾಗ ಡಾಮರೀಕರಣ ಮಾಡದೇ ಇರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಅನೇಕ ವಾಹನಗಳು ಅಪಘಾತ ಸಂಭವಿಸಿದ್ದು, ಈ ಬಗ್ಗೆ ಸದ್ರಿ ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಗೆ ಮರು ಡಾಮರೀಕರಣ ನಡೆಸಲು ನಾವು ಅನೇಕ ಬಾರಿ ತಿಳಿಸಿದ್ದರೂ, ಡಾಮರೀಕರಣ ಮಾಡದೇ ಅಸಡ್ಡೆ ವಹಿಸಿರುತ್ತಾರೆ.
ಸದ್ರಿ ಡಾಮರೀಕರಣ ಮಾಡುವ ಬಗ್ಗೆ ಶಿರ್ವ ಗ್ರಾಮ ಪಂಚಾಯತ್ ನಿಂದ ಅನೇಕ ಬಾರಿ ತಿಳಿಸಿದ್ದರೂ ನಿರ್ಲಕ್ಷ ವಹಿಸಿದ್ದು, ಆದುದರಿಂದ 1ವಾರದೊಳಗೆ ಸದ್ರಿ ಡಾಮರೀಕರಣವನ್ನು ನಡೆಸದೇ ಇದ್ದಲ್ಲಿ ಸದ್ರಿ ಕಾಮಗಾರಿ ನಡೆಸಿರುವ ಗುತ್ತಿಗಾರ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಮತ್ತು ಪ್ರತಿಭಟನೆ ನಡೆಸಬೇಕಾಗಬಹುದು ಎಂದು ಶಿರ್ವ ಗ್ರಾಮೀಣ ಕಾಂಗ್ರೇಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ ಆಗ್ರಹಿಸಿದ್ದಾರೆ.