ಫೆ.29ರಿಂದ ಪೇಟಿಎಂ ವಹಿವಾಟು ನಿರ್ಬಂಧಿಸಿದ ಆರ್ ಬಿ ಐ
ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಫೆಬ್ರವರಿ 29 ರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಗೆ ವಹಿವಾಟು ಮಾಡದಂತೆ ನಿರ್ಬಂಧ ಹೇರಿದೆ. ಆರ್‌ಬಿಐ ಆದೇಶದಂತೆ ಗ್ರಾಹಕ ಖಾತೆ ಅಥವಾ ವ್ಯಾಲೆಟ್‌ಗಳು ಮತ್ತು ಫಾಸ್ಟ್‌ಟ್ಯಾಗ್‌ಗಳ ಠೇವಣಿಗಳನ್ನು ಸ್ವೀಕರಿಸುವುದರಿಂದ ಅಥವಾ ಕ್ರೆಡಿಟ್ ವಹಿವಾಟುಗಳು ಅಥವಾ ಟಾಪ್-ಅಪ್‌ಗಳಿಗೆ ನಿರ್ಬಂಧಿಸಿದೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.