ಉಡುಪಿ: ವಕೀಲರ ರಾಜ್ಯ ಮಟ್ಟದ ಸಾಂಸ್ಕ್ರತಿಕ ಸ್ಥರ್ಧೆ “ಕಲಾ ಸಂಭ್ರಮ” ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ: ವಕೀಲರ ಸಂಘವು ಫೆಬ್ರವರಿ 10 ಮತ್ತು 11 ರಂದು ಉಡುಪಿ ನ್ಯಾಯಾಲಯ ಆವರಣದಲ್ಲಿ ವಕೀಲರಿಗಾಗಿ ಆಯೋಜಿಸಿರುವ ರಾಜ್ಯ ಮಟ್ಟದ ಸಾಂಸ್ಕ್ರತಿಕ ಸ್ಪರ್ಧಾಕೂಟ”ಕಲಾ ಸಂಭ್ರಮ” ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಇಂದು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರನ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಸಾಂಸ್ಕ್ರತಿಕ ಕಾರ್ಯದರ್ಶಿ ಸಂತೋಷ್ ಕುಮಾರ್ ಮೂಡುಬೆಳ್ಳೆ,ಕಾರ್ಯಕಾರಿ ಸಮಿತಿ ಸದಸ್ಯರಾದ ಆರೂರು ಸುಕೇಶ್ ಶೆಟ್ಟಿ,ಸೀನಿಯರ್ಸ್ ಕಮಿಟಿ ಸದಸ್ಯರಾದ ಆನಂದ ಮಡಿವಾಳ,ಜಯಕೃಷ್ಣ ಆಳ್ವ ಹಾಗೂ ಹಿರಿಯ ನ್ಯಾಯವಾದಿ ಎ.ಸಂಕಪ್ಪ ಉಪಸ್ಥಿತರಿದ್ದರು.